ಹುಣಸೂರು : ವ್ಯಕ್ತಿಯೊಬ್ಬರು ಬೈಕ್‌ನಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ರೋಡೆಟರ್ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ನಡೆದಿದೆ.
ನಗರದಿಂದ ಮಡಿಕೇರಿಗೆ ತೆರಳುತ್ತಿದ್ದ ಕೊಲ್ಕತ್ತಾ ನಿವಾಸಿ ಮಕ್ಸೂದ್ ಅಹ್ಮದ್ ಖಾನ್‌ರವರ ಹಿರಿಯ ಮಗ ಆಸಿಮ್ ಖಾನ್ (೩೦) ಮೃತಪಟ್ಟ ವ್ಯಕ್ತಿ. ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಶನಿವಾರ ಸಂಜೆ ಕೆಲಸ ಮುಗಿಸಿಕೊಂಡು ಬೆಂಗಳೂರಿಂದ ಮಡಿಕೇರಿ ಕಡೆಗೆ ಪ್ರವಾಸಕ್ಕೆ ತೆರಳುತ್ತಿದ್ದಾಗ ಯಶವತಪುರ ಹೆದ್ದಾರಿ ರಸ್ತೆ ಮುಂಭಾಗ ಈ ದುರ್ಘಟನೆ ಸಂಭವಿಸಿದೆ.
ಹುಣಸೂರು ಫ್ರೀಡಂ ಯುವಕರ ಸಮಿತಿಯವರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ನಂತರ ಕೊಲ್ಕತ್ತಾದಿಂದ ಬಂದ ಮೃತರ ಸಂಬಂಧಿಕರಿಗೆ ಶವವನ್ನು ರವಾನಿಸಲಾಯಿತು
ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





