ಹೊಸೂರು : ಇಬ್ಬರು ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಒಬ್ಬನಿಗೆ ಚಾಕುವಿನಿಂದ ಇರಿದಿರುವ ಘಟನೆ ಸಾಲಿಗ್ರಾಮ ತಾಲ್ಲೂಕಿನ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಅಂಕನಹಳ್ಳಿ ಕೊಪ್ಪಲು ಗ್ರಾಮದ ಕುಮಾರ್ ಚಾಕುವಿನಿಂದ ಇರಿತಕ್ಕೆ ಒಳಗಾಗಿದ್ದು, ಮಾಯಿಗೌಡನಹಳ್ಳಿ ಗ್ರಾಮದ ಸಚಿನ್ ಅಲಿಯಾಸ್ ಕಾಕ್ರೋಜ್ ಚಾಕುವಿನಿಂದ ಇರಿದ ಅರೋಪಿ.
ಶನಿವಾರ ರಾತ್ರಿ ಕುಮಾರ್ ಮತ್ತು ಬೆಂಗಲಿಗರು ಸಚಿನ್ ಎಂಬಾತನ ಮೇಲೆ ಗಲಾಟೆ ನಡೆಸಿದ್ದು, ಭಾನುವಾರ ಬೆಳಿಗ್ಗೆ ಮಾಯಿಗೌಡನಹಳ್ಳಿ ಗ್ರಾಮಕ್ಕೆ ಬಂದ ಕುಮಾರ್‌ನ ಜತೆ ಸಚಿನ್ ಜಗಳ ತೆಗೆದು ಚಾಕುವಿನಿಂದ ಹೊಟ್ಟೆಗೆ ಚುಚ್ಚಿದ್ದಾನೆ.
ಕೂಡಲೇ ಕುಮಾರ್‌ನನ್ನು ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿನ್‌ನನ್ನು ಸಾಲಿಗ್ರಾಮ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಘಟನಾ ಸ್ಥಳಕ್ಕೆ ಚುಂಚನಕಟ್ಟೆ ಉಪಪೊಲೀಸ್ ಠಾಣೆಯ ಉಪಠಾಣಾಧಿಕಾರಿ ದೊರೆಸ್ವಾಮಿ, ಸಿಬ್ಬಂದಿ ಅವಿನಾಶ್ ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





