Mysore
21
overcast clouds
Light
Dark

ಚುನಾವಣೆ ಭವಿಷ್ಯ ನುಡಿದ ಶ್ವಾನ; ಮೈಸೂರಲ್ಲಿ ಗೆಲ್ಲೋರ್ಯಾರು?

ಮೈಸೂರು: ಲೋಕಸಭಾ ಚುನಾವಣೆಯ ಎಕ್ಸಿಟ್‌ ಪೋಲ್‌ಗಳು ಹೊರಬಿದ್ದಿದ್ದು, ಮೋದಿ ಮತ್ತೊಮ್ಮೆ ಗದ್ದುಗೆ ಹಿಡಿಯಲಿದ್ದಾರೆ ಎಂದು ಬಹುತೇಕ ಸರ್ವೆಗಳು ಹೇಳುತ್ತಿವೆ. ಇದರ ಜೊತೆಗೆ ಮೈಸೂರಿನ ಶ್ವಾನವೊಂದು ಚುನಾವಣಾ ಫಲಿತಾಂಶದ ಭವಿಷ್ಯ ನುಡಿದಿದೆ.

ಮೈಸೂರಿನ ಕೆ.ಟಿ. ಸ್ಟ್ರೀಟ್‌ನ ಕಾಲಬೈರವೇಶ್ವರ ದೇಗುಲದ ಭೈರವ ಎಂಬ 2 ವರ್ಷದ ಶ್ವಾನ ಈ ಬಾರಿ ಕೇಂದ್ರದಲ್ಲಿ ಮೋದಿ ಹಾಗೂ ಮೈಸೂರಿನಲ್ಲಿ ಯದುವೀರ್‌ ಗೆಲ್ಲಲಿದ್ದಾರೆ ಎಂದು ಭವಿಷ್ಯ ಹೇಳಿದೆ.

ಈ ಶ್ವಾನದ ಮುಂದೆ ಪ್ರಧಾನಿ ಮೋದಿ ಹಾಗೂ ರಾಹುಲ್‌ ಗಾಂಧಿ ಅವರ ಭಾವವಿತ್ರ ಇಟ್ಟಾಗ ಶ್ವಾನ ಮೋದಿಯವರ ಭಾವಚಿತ್ರ ಆಯ್ಕೆ ಮಾಡಿದೆ. ಅದರಂತೆ ಮೈಸೂರು ಕೊಡಗು ಕ್ಷೇತ್ರದ ಅಭ್ಯರ್ಥಿಗಳಾದ ಎಂ.ಲಕ್ಷ್ಮಣ್‌ ಹಾಗೂ ಯದುವೀರ್‌ ಕೃತ್ತದತ್ತ ಚಾಮರಾಜ ಒಡೆಯರ್‌ ಭಾವಚಿತ್ರ ಇಟ್ಟಾಗ ಯದುವೀರ್‌ ಭಾವಚಿತ್ರ ಆಯ್ಕೆ ಮಾಡಿ ಚುನಾವಣಾ ಭವಿಷ್ಯ ಹೇಳಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.