ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನಗರದ ಹೊರವಲಯದ ದೇವನೂರಿನಲ್ಲಿ ಎರಡು ಕಡೆಗಳಲ್ಲಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಒತ್ತುವರಿಯಾಗಿದ್ದ ಒಟ್ಟು 9 ಎಕರೆ ಜಾಗವನ್ನು ತೆರವುಗೊಳಿಸಿದರು.
ಎಂಡಿಎ ಆಯುಕ್ತ ಕೆ. ಆರ್. ರಕ್ಷಿತ್ ಅವರ ಸೂಚನೆ ಮೇರೆಗೆ ಪೊಲೀಸ್ ಭದ್ರತೆಯೊಂದಿಗೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಜೆಸಿಬಿ ಯಂತ್ರಗಳ ಮೂಲಕ ವಾಹನ ಪಾರ್ಕಿಂಗ್ ಹಾಗೂ ಇತರೆ ಶೆಡ್ ಗಳನ್ನು ತೆರವು ಮಾಡಿದರು.
ಮೈಸೂರು ತಾಲ್ಲೂಕು ದೇವನೂರು ಬಡಾವಣೆಯ ಸರ್ವೇ ನಂ. ೧೫೫, ೧೫೬, ೧೫೩/೨ರ ವ್ಯಾಪ್ತಿಯ ೫ ಎಕರೆ, ೧೯ ಗುಂಟೆ ಹಾಗೂ ಸರ್ವೇ ನಂ. ೨೨೮/೨, ೨೨೯/೧, ೨೨೯/೨ರ ವ್ಯಾಪ್ತಿಯ ೩ ಎಕರೆ, ೨೨ ಗುಂಟೆ ಜಾಗವನ್ನು ತೆರವು ಮಾಡಲಾಯಿತು.
ಎಂಡಿಎ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುನಿತಾ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.





