Mysore
29
overcast clouds

Social Media

ಶನಿವಾರ, 15 ಆಗಸ್ಟ್ 2026
Light
Dark

80 ವರ್ಷ ಮೇಲ್ಪಟ್ಟ ವಿಶೇಷ ಚೇತನರಿಗೆ ಅಂಚೆ ಮತದಾನದ ಮೂಲಕ ವಿಶೇ಼ಷ ಅಭಿಯಾನ

ಮೈಸೂರು :  ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಅತಿ ಮುಖ್ಯವಾದ ಈ ಕರ್ತವ್ಯ ನಿರ್ವಹಣೆಯಿಂದ ದೂರ ಉಳಿದಿರುವ ವಿದ್ಯಾವಂತರ ಸಂಖ್ಯೆ ಸಹ ಹೆಚ್ಚು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಭಾಗವಹಿಸುವಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರ ನೇತೃತ್ವದಲ್ಲಿ ಹಲವು ಅಭಿಯಾನಗಳನ್ನು ಮಾಡಲಾಗುತ್ತದೆ. ಎರಡು ಕಡೆ ಹೆಸರಿರುವ ಮತದಾರರ ಹೆಸರುಗಳನ್ನು ಡಿಲೀಟ್‌ ಮಾಡಲಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲನೆ ನಡೆಸಿಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ

 

80 ವರ್ಷ ತುಂಬಿದವರು, ಹಾಸಿಗೆ ಹಿಡಿದಿರುವವರು, ವಿಶೇಷ ಚೇತನರ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಅಂದಾಜು 80,000ಕ್ಕೂ ಹೆಚ್ಚು 80 ವರ್ಷ ಪೂರೈಸಿದವರು ಹಾಗೂ 30,000 ವಿಶೇಷ ಚೇತನರಿದ್ದಾರೆ. ಇವರೆಲ್ಲರಿಗೂ ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು’’ ಎಂದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!