ಮೈಸೂರು : ಮಾರಾಟವಾಗದೆ ಉಳಿದಿದ್ದ 5,288 ಲೀಟರ್ ಬೀಯರ್ ಅನ್ನು ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬುಧವಾರ ನಾಶಪಡಿಸಿದರು.
ಕೆಎಸ್‌ಬಿಸಿಎಲ್ ಮೈಸೂರು-1 ಡಿಪೋ ಕೂರ್ಗಳ್ಳಿಯ ಅಬಕಾರಿ ಉಪ ಅಧಿಕ್ಷಕ ಎಲ್.ಬಿ.ವಿಕ್ರಮ್ ಮತ್ತು ಡಿಪೋನ ವ್ಯವಸ್ಥಾಪಕರು, ಮತ್ತು ಇಲಾಖಾ ಸಿಬ್ಬಂದಿಗಳೊಂದಿಗೆ ಮಾರಾಟವಾಗದೆ ಉಳಿದಿದ್ದ ಒಟ್ಟು 3185 ಲೀಟರ್ ಬಿಯರ್‌ನ್ನು ಹಾಗೂ ಕೆ.ಎಸ್.ಬಿ.ಸಿ.ಎಲ್. ಮೈಸೂರು-2 ಡಿಪೋ ಅಬಕಾರಿ ನಿರೀಕ್ಷಕರು ಹಾಗೂ ಡಿಪೋನ ವ್ಯವಸ್ಥಾಪಕರು ಮತ್ತು ಇಲಾಖಾ ಸಿಬ್ಬಂದಿಗಳೊಂದಿಗೆ ಮಾರಾಟವಾಗದೆ ಉಳಿದಿದ್ದ ಒಟ್ಟು 2013ಲೀಟರ್ ಬಿಯರ್ ಒಳಗೊಂಡಂತೆ ಒಟ್ಟು 5,288 ಲೀಟರ್ ಬಿಯರ್‌ನ್ನು ನಾಶಪಡಿಸಲಾಯಿತು ಎಂದು ಅಬಕಾರಿ ಉಪ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು ನಗರ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಮೈಸೂರು ಉಪ ವಿಭಾಗದ ಅಬಕಾರಿ ಉಪ ಅಧಿಕ್ಷಕರಾದ ಎಚ್.ಕೆ.ರಮೇಶ್ ನೇತೃತ್ವದಲ್ಲಿ ನಾಶ ಮಾಡಲಾಯಿತು





