ಮೈಸೂರು: ಹನೂರಿನ ಸಮೀಪದ ಅರಣ್ಯದಲ್ಲಿ 5 ಹುಲಿಗಳ ಸಾವಿಗೆ ವಿಷಪ್ರಶಾನದ ಶಂಕೆ ದೃಢವಾಗಿದೆ. ಹೀಗಾಗಿ, ತಪ್ಪಿತಸ್ತರಿಗೆ ಸುಮಾರು 7 ವರ್ಷ ಜೈಲು ಶಿಕ್ಷೆಯಾಗಲಿದೆ ಎಂದ ಹಿರಿಯ ಅರಣ್ಯಧಿಕಾರಿ ಹಾಗೂ ನಿವೃತ್ತ ಡಿಸಿಎಫ್ ಪೂವಯ್ಯ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಷ ಹಾಕಿರಬಹುದು ಎಂಬ ಶಂಕೆ ದೃಢವಾಗಿದೆ. ಫಾರೆನ್ಸಿಕ್ ಲ್ಯಾಬ್ ನಿಂದ ವರದಿ ಬರಲು ಒಂದುವಾರ ಆಗಲಿದೆ. ಬಳಿಕ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಹೇಳಿದರು.
ಹುಲಿಗಳು ಒಂದು ಪ್ರಾಣಿಯನ್ನು ಕೊಂದ ಬಳಿಕ ಅದು ಸಂಪೂರ್ಣ ಮುಗಿಯುವವರೆಗೂ ಬೇರೆ ಪ್ರಾಣಿಯನ್ನು ಕೊಲ್ಲುವುದಿಲ್ಲ. ಹಾಗೆಯೇ ಇತ್ತೀಚಿಗೆ ಈ ಭಾಗದಲ್ಲಿ ಒಂದು ಹಸು ಬಲಿ ಪಡೆದಿದೆ ಎನ್ನುವ ಮಾಹಿತಿ ಇದೆ. ವಾಚರ್‌ಗಳಿಗೆ ಸಂಬಳ ನೀಡದಿರುವುದೇ ಇದಕ್ಕೆಲ್ಲ ಕಾರಣ ಎಂದು ಹೇಳಲು ಸಾಧ್ಯವಿಲ್ಲ ಎಂದರು.
5 ಹುಲಿ ಸಾವು ದೊಡ್ಡ ನಷ್ಟ: ನನ್ನ ಅವಧಿಯಲ್ಲೂ ಈ ಹಿಂದೆ ಚಿರತೆಗೆ ವಿಷ ಹಾಕಿದ್ದ ಪ್ರಕರಣ ಗುಂಡ್ಲುಪೇಟೆಯಲ್ಲಿ ಜರುಗಿತ್ತು. ಆ ವೇಳೆ ಕಾನೂನು ಶಿಕ್ಷೆಯಾಗಿತ್ತು. ಈ ಪ್ರಕಾರಣದಲ್ಲೂ ಅದೇ ಮಾದರಿ ಶಿಕ್ಷೆ ಆಗಲಿದೆ. 5 ಹುಲಿ ಸಾವು ದೊಡ್ಡ ನಷ್ಟ. ಇದರಲ್ಲಿ ಅಧಿಕಾರಿಗಳ ಪಾತ್ರವೇನಿಲ್ಲ. ಸಾವಿಗೆ ವಿಷ ಹಾಕಿದವರೇ ನೇರ ಹೊಣೆಯಾಗುತ್ತಾರೆ ಎಂದು ಹೇಳಿದರು.





