Mysore
32
scattered clouds

Social Media

ಮಂಗಳವಾರ, 14 ಏಪ್ರಿಲ 2026
Light
Dark

25 ಲಕ್ಷ ರೂ. ಶುಲ್ಕ ಪಡೆದು ಉಪನ್ಯಾಸಕಿ ನಾಪತ್ತೆ: ಪ್ರವೇಶ ಪತ್ರ ಸಿಗದೆ‌ ಮೈಸೂರಿನ ವಿದ್ಯಾರ್ಥಿಗಳು ಅತಂತ್ರ

ಮೈಸೂರು : ವಿದ್ಯಾರ್ಥಿಗಳಿಂದ ಶುಲ್ಕ ಪಡೆದು ಉಪನ್ಯಾಸಕಿ ನಾಪತ್ತೆ ಆರೋಪ ಕೇಳಿ ಬಂದಿದ್ದು, ಹಣವೂ ಇಲ್ಲದೇ, ನಾಳಿನ ಪರೀಕ್ಷೆಗೆ ಪ್ರವೇಶ ಪತ್ರವು ಸಿಗದೆ‌ ವಿದ್ಯಾರ್ಥಿಗಳು ಅತಂತ್ರರಾಗಿರುವಂತಹ ಘಟನೆ ನಗರದ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.

ಉಪನ್ಯಾಸಕಿ ಹರ್ಷಿತಾ ವಿರುದ್ಧ ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಜು. 6ರಂದೇ ಉಪನ್ಯಾಸಕಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 468, 470, 420ರ ಅಡಿ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಗೂಗಲ್​ಪೇ ಹಾಗೂ ಫೋನ್​ಪೇ ಮೂಲಕ 200 ವಿದ್ಯಾರ್ಥಿಗಳಿಂದ 25 ಲಕ್ಷ ರೂ. ಶುಲ್ಕ ಪಡೆದಿದ್ದು, ವಿದ್ಯಾರ್ಥಿಗಳ ಹಣ ದುರುಪಯೋಗ ಪಡಿಸಿಕೊಂಡಿರುವುದಾಗಿ ಆರೋಪಿಸಲಾಗಿದೆ.

ಫೀಸ್​ ಸಂದಾಯವಾಗದ ಹಿನ್ನೆಲೆ ಕಾಲೇಜಿನಲ್ಲಿ ಪ್ರವೇಶಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಸದ್ಯ ನಾಪತ್ತೆಯಾಗಿರುವ ಉಪನ್ಯಾಸಕಿ ಹರ್ಷಿತಾಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!