Mysore
20
overcast clouds
Light
Dark

ಜೂನ್ 7ಕ್ಕೆ ಸಹಾರಾ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮೈಸೂರು: ಮಹಿಳಾ ಕ್ರಿಕೆಟ್ ಆಧರಿತ ಸಹಾರಾ ಸಿನಿಮಾ ಇದೇ ಜೂ. 7 ರಂದು ರಾಜ್ಯದಾದ್ಯಂತ ತೆರೆಕಾಣಲಿದೆ. ಹೀಗಾಗಿ ಜನತೆ ಚಿತ್ರಮಂದಿರಗಳಿಗೆ ತೆರಳಿ ವೀಕ್ಷಿಸುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ಚಿತ್ರದ ನಾಯಕಿ ನಟಿ  ಸಾರಿಕಾ ರಾವ್  ಮನವಿ ಮಾಡಿದರು.

ಅವರು ಇಂದು(ಜೂನ್.‌೫) ನಗರದಲ್ಲಿ ಸುದ್ದಿಗಾರರೊಡನ ಮಾತನಾಡಿ, ಪುರುಷರ ಕ್ರಿಕೆಟ್‌ಗೆ ಹೆಚ್ಚು ಪ್ರಾಧಾನ್ಯತೆ ನೀಡಿ, ಮಹಿಳಾ ಕ್ರಿಕೆಟ್ ಕಡೆಗಣಿಸಲಾಗಿದೆ. ಹೀಗಾಗಿ ಮಂಡ್ಯ ಮೂಲಕ ಗ್ರಾಮೀಣ ಪ್ರದೇಶದ ಯುವತಿಯೊಬ್ಬರು ಕ್ರಿಕೆಟ್‌ನಲ್ಲಿ ಸಮಸ್ಯೆ ಎದುರಿಸಿ ಮಾಡುವ ಸಾಧನೆಯ ಎಳೆ ಎಳೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದದರು.

ಇನ್ನು ಭಾರತ ತಂಡದ ಮಾಜಿ ಆಟಗಾರ ಡೇವಿಡ್ ಜಾನ್ಸ್ ಸುನಿಲ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಂಜೇಶ್ ಭಗವತ್ ಚಿತ್ರದ ನಿರ್ಮಾಣದ ಜೊತೆಗೆ ಆಕ್ಸನ್‌ ಕಟ್‌ ಹೇಳಿದ್ದಾರೆ.  ನಂಜನಗೂಡಿನ ಕಳಲೆ ಗ್ರಾಮ ಮತ್ತು ನಗರದ ಸುತ್ತಮುತ್ತ ಚಿತ್ರೀಕಣರ ನಡೆದಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕ ಮಂಜೇಶ್ ಭಗವತ್, ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಬೀಡನಹಳ್ಳಿ ಸತೀಶ್‌ ಗೌಡ, ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಗೋವಿಂದರಾಜು ಲಯನ್ ಲೋಕೇಶ್ ಸೇರಿ ಇನ್ನಿತರರು ಹಾಜರಿದ್ದರು.