Light
Dark

ದಸರಾ ಚಲನಚಿತ್ರೋತ್ಸವದಲ್ಲಿ ಕಿರು ಚಿತ್ರ ತಯಾರಿಕೆ ಸ್ಪರ್ಧೆ

ಮೈಸೂರು:- ಈ ಬಾರಿಯ ದಸರಾ ಚಲನಚಿತ್ರೋತ್ಸವದಲ್ಲಿ ಕಿರು ಚಿತ್ರ ತಯಾರಿಕೆ ಸ್ಪರ್ಧೆ ಸೇರಿದಂತೆ ಹಲವು ವಿಶೇಷತೆಗಳನ್ನು ನೀಡಲು, ದಸರಾ ಚಲನ ಚಿತ್ರೋತ್ಸವ ಉಪ ಸಮಿತಿ ಸಿದ್ಧತೆ ನಡೆಸಿದೆ.
ಇಂದು ಪ್ರವಾಸೋದ್ಯಮ ಇಲಾಖೆಯ ಕಚೇರಿಯಲ್ಲಿ ದಸರಾ ಚಲನಚಿತ್ರೋತ್ಸವ ಸಮಿತಿಯ ಉಪ ವಿಶೇಷಾಧಿಕಾರಿ ಹಾಗೂ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ದಸರಾ ಚಲನಚಿತ್ರೋತ್ಸವಕ್ಕೆ ಸಂಬoಧ ಮೊದಲ ಪೂರ್ವ ಭಾವಿ ಸಭೆ ನಡೆಸಲಾಯಿತು.
ಅಕ್ಟೋಬರ್ 16 ರಿಂದ 22 ರವರಗೆ ನಗರದ ಮಾಲ್ ಆಫ್ ಮೈಸೂರಿನಲ್ಲಿರುವ ಐನಾಕ್ಸ್ ಹಾಗೂ ಡಿಆರ್‍ಸಿ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ದಸರಾ ಚಲನ ಚಿತ್ರೋತ್ಸವವನ್ನು ಆಯೋಜಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಅಕ್ಟೋಬರ್ 15 ರಂದು ಕಲಾಮಂದಿರದಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚಿತ್ರ ಗಣ್ಯರು ದಸರಾ ಚಲನಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಈ ಹಿನ್ನೆಲೆಯಲ್ಲಿ ಸಿನಿಮಾ ನಟರು ಕಾರ್ಯಕ್ರಮದಲ್ಲಿ ಭಾಗವಹಿಸಿ, ತಾರಾ ರಂಗು ನೀಡಲು ಹಾಗೂ ಅವರನ್ನು ಆಹ್ವಾನಿಸಲು ಸಮಿತಿಯಿಂದ ಅಗತ್ಯ ಕ್ರಮವಹಿಸುವ ಬಗ್ಗೆ ಚರ್ಚಿಸಲಾಯಿತು.
ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಕನ್ನಡ ಸಿನಿಮಾಗಳು ಸೇರಿದಂತೆ ಜನಪ್ರಿಯ ಕನ್ನಡ ಸಿನಿಮಾ, ಕಲಾತ್ಮಕ ಸಿನಿಮಾಗಳು, ಜನಪ್ರಿಯಗೊಂಡಿರುವ ಭಾರತೀಯ ಸಿನಿಮಾಗಳು ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಸಿನಿಮಾಗಳನ್ನು ಪ್ರದರ್ಶಿಸಲು ಸಮಿತಿಯಿಂದ ತೀರ್ಮಾನಿಸಲಾಯಿತು.
2023ರ ಮೈಸೂರು ದಸರಾ ಚಲನಚಿತ್ರೋತ್ಸವ ಉಪ ಸಮಿತಿ ವತಿಯಿಂದ ಕಿರುಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಕಿರುಚಿತ್ರವನ್ನು ಗೂಗಲ್ ಡ್ರೈವ್ ಅಥವಾ ಯೂಟ್ಯೂಬ್‍ಗೆ ಅಪೆÇ್ಲೀಡ್ ಮಾಡಿ ಅದರ ಲಿಂಕ್ ಅನ್ನು ಅರ್ಜಿಯಲ್ಲಿ ನಮೂದಿಸಬೇಕು. ನೋಂದಣಿಗೆ ಸೆ. 30 ಕೊನೆಯ ದಿನಾಂಕವಾಗಿದ್ದು, ನೋಂದಣಿ ಶುಲ್ಕ 100 ರೂ. ಪಾವತಿಸಬೇಕು.
ಸಭೆಯಲ್ಲಿ ದಸರಾ ಚಲನಚಿತ್ರೋತ್ಸವ ಉಪ ವಿಶೇಷಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸವಿತಾ ಎಂ.ಕೆ, ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಕೆ.ಐ.ಎ.ಡಿ.ಬಿ ವಿಶೇಷ ಭೂ ಸ್ವಾಧೀನಾಧಿಕಾರಿಯಾದ ವಿ.ಪ್ರಿಯದರ್ಶಿನಿ, ಕಾರ್ಯದರ್ಶಿ ಹಾಗೂ ವಾರ್ತಾ ಇಲಾಖೆ ಉಪ ನಿರ್ದೇಶಕರಾದ ಅಶೋಕ್ ಕುಮಾರ್, ಸಹ ಕಾರ್ಯದರ್ಶಿ ಹಾಗೂ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ಟಿ.ಕೆ. ಹಾಗೂ ಶ್ರೇಯಸ್ ಉಪಸ್ಥಿತರಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ