Mysore
24
overcast clouds

Social Media

ಬುಧವಾರ, 27 ಮೇ 2026
Light
Dark

ಶಾಲಾ ಪ್ರವಾಸದ ಬಸ್‌ ಪಲ್ಟಿ : ಮೈಸೂರು ಮೂಲದ ವಿದ್ಯಾರ್ಥಿಗಳಿಗೆ ಗಾಯ

ಮೈಸೂರು : ಶಾಲಾ ಪ್ರವಾಸಕ್ಕೆ ತೆರಳಿದ್ದ ಜಿಲ್ಲೆಯ ಹುಣಸೂರು ತಾಲ್ಲೂಕಿನ ಧರ್ಮಪುರಿ ಪ್ರೌಢ ಶಾಲೆಯ ಬಸ್‌ ಪಲ್ಟಿಯಾದ ಪರಿಣಾಮ 20 ಮಕ್ಕಳು ಗಾಯಗೊಂಡಿರುವ ಘಟನೆ ಸಿವಮೊಗ್ಗದ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ತುಮರಿ ಸಮೀಪದ ಒಕ್ಕೋಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 369ಇ ಬಳಿ ನಡೆದಿದೆ.

10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದ್ದು,  ಬಸ್ ನಲ್ಲಿ 83 ವಿದ್ಯಾರ್ಥಿಗಳು ಇದ್ದರು. ಗಾಯಾಳುಗಳನ್ನು ಸಾಗರ ಉಪವಿಭಾಗೀಯ ಅಸ್ಪತ್ರೆಗೆ ದಾಖಲಿಸಲಾಗಿದೆ.

ಮೈಸೂರಿನಿಂದ ಶಿವಮೊಗ್ಗ, ಹೊಸನಗರ ಮಾರ್ಗವಾಗಿ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ತೆರಳುವ  ವೇಳೆ ಈ ಅಪಘಾತ ಸಂಭವಿಸಿದೆ.

:

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!