Mysore
28
scattered clouds

Social Media

ಶನಿವಾರ, 30 ಮೇ 2026
Light
Dark

ರಮಾಬಾಯಿನಗರ ನೀರಿನ ಬಿಲ್ ಪರಿಷ್ಕರಣೆಗೆ ಸಿಎಂ ಆದೇಶ

 

ಸ್ಥಳೀಯ ನಿವಾಸಿಗಳ ಬೇಡಿಕೆ ಆಧರಿಸಿ ಶಾಸಕ ಜಿ.ಟಿ.ದೇವೇಗೌಡರ ಮನವಿ ಮೇರೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ

ಮೈಸೂರು: ಮೈಸೂರು ಹೊರ ವಲಯದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ರಮಾಬಾಯಿ ನಗರದ ನಿವಾಸಿಗಳ ನೀರಿನ ಬಿಲ್ ಪರಿಷ್ಕರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಮೈಸೂರಿಗೆ ಆಗಮಿಸಿದ್ದ ಸಿಎಂ ಅವರನ್ನು ಭೇಟಿ ಮಾಡಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವಗೌಡ ನೀರಿನ ಬಿಲ್ ಪರಿಷ್ಕರಣೆ ಕೋರಿಕೆ ಸಲ್ಲಿಸಿದರು. ಇದಕ್ಕೆ ತತ್‌ಕ್ಷಣವೇ ಸ್ಪಂದಿಸಿದ ಸಿಎಂ, ಮೈಸೂರು ನಗರ ಪಾಲಿಕೆ ಆಯುಕ್ತರು ಹಾಗೂ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಈ ಸೂಚನೆ ನೀಡಿದರು.

ಇತ್ತೀಚಿಗಷ್ಟೇ ಮೇಲ್ದರ್ಜೇಗೇರಿಸಲ್ಪಟ್ಟ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಮಾಬಾಯಿನಗರದ ನಿವಾಸಿಗಳು ಮುಖಂಡರಾದ ಯೋಗಶ್ರೀನಿವಾಸ ರೊಡನೆ ನನ್ನನ್ನು ಸಂಪರ್ಕಿಸಿ ೨೦ ವರ್ಷಗಳಿಂದ ಮಹಾನಗರ ಪಾಲಿಕೆಯವರು ಅವೈಜ್ಞಾನಿಕವಾಗಿ ನೀರಿನ ದರವನ್ನು ನಿಗದಿಪಡಿಸಿದ್ದು ಬಡತನ ರೇಖೆಗಿಂತ ಕೆಳಗಿರುವ ನಾವುಗಳು ರೂ ೪೦-೫೦ಸಾವಿರ ರೂಗಳಷ್ಟು ಬಿಲ್ಲನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದರು. ಇದನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಯಿತು. ಅವೈಜ್ಞಾನಿಕವಾಗಿ ನಿಗದಿ ಪಟಿಡಿಸಿದ್ದ ನೀರಿನ ಬಿಲ್ಲುಗಳನ್ನು ಪರಿಷ್ಕರಿಸಿ ನ್ಯಾಯಬದ್ದವಾಗಿ ಪಾವತಿಸಬೇಕಾದ ಮೊತ್ತವನ್ನು ಸ್ಥಳೀಯ ಸಂಸ್ಥೆಗೆ ಪಾವತಿಸಿ ಖಾತೆ ಮತ್ತು ಕಂದಾಯಗಳನ್ನು ಪಡೆಯಲು ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು ಎಂದು ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಇದಲ್ಲದೇ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ,ಮಹದೇವಪುರ, ಲಿಂಗಾಂಬುಧಿಪಾಳ್ಯ, ಪರಸಯ್ಯನಹುಂಡಿ, ಟೆಂಪಲ್ ಬೆಲ್ ಬಡಾವಣೆ, ವಿಶ್ವವಿದ್ಯಾನಿಲಯ ಬಡಾವಣೆಗಳಿಗೆ ಕಬಿನಿ ನೀರನ್ನು ಸಂಪರ್ಕಿಸುವ ಕಾಮಗಾರಿಯನ್ನು ಕೈಗೊಂಡು, ಆಗಸ್ಟ್ ತಿಂಗಳ ಅಂತ್ಯದೊಳಗೆ ಈ ಬಡಾವಣೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಮುಖ್ಯಮಂತ್ರಿ ಗಳು ಪಾಲಿಕೆ ಆಯುಕ್ತರು ಮತ್ತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಗಳಿಗೆ ಸೂಚಿಸಿದರು ಎಂದು ವಿವರಿಸಿದ್ದಾರೆ.

ನೀರಿನ ಬಿಲ್ ಪರಿಷ್ಕರಣೆ ಸಂಬಂಧ ಪಾಲಿಕೆ ಮತ್ತು ಪಟ್ಟಣ ಪಂಚಾಯತಿಯಿಂದ ಅಧಿಕೃತ ಆದೇಶವನ್ನು ಶೀಘ್ರವಾಗಿ ಹೊರಡಿಸಲಾಗುವುದು.ರಮಾಬಾಯಿನಗರಸ ನಿವಾಸಿಗಳು ಆತಂಕ ಪಡಬೇಕಾಗಿಲ್ಲ. ಪಟ್ಟಣ ಪಂಚಾಯತಿ ವ್ಯಾಪ್ತಿಯ ಶೀಘ್ರವಾಗಿ ಎಲ್ಲಾ ಬಡಾವಣೆಗಳಲ್ಲಿ ಕಂದಾಯ ಅದಾಲತ್ ನಡೆಸಿ ಖಾತೆ, ಕಂದಾಯವನ್ನು ಸ್ಥಳದಲ್ಲಿಯೇ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!