ಮೈಸೂರು : ಇಂದು ಶಾಸಕ ಎಲ್. ನಾಗೇಂದ್ರ ಅವರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಹಾಗೂ ಕಲಾ ಕಾಲೇಜಿಗೆ ಭೇಟಿ ನೀಡಿದರು.
ಕಾಲೇಜು ಕಟ್ಟಡಗಳ ವೀಕ್ಷಣೆಯನ್ನು ರೈಟ್ಸ್ ಸಂಸ್ಥೆಯ ಇಂಜಿನಿಯರುಗಳೊಂದಿಗೆ ಹಾಗೂ ಕಾಲೇಜಿನ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರುಗಳೊಂದಿಗೆ ನಡೆಸಿದರು.
ಬಳಿಕ ಅಗತ್ಯವಾದ ದುರಸ್ತಿ, ನವೀಕರಣ, ನಿರ್ಮಾಣ ಕಾಮಗಾರಿಗಳ ವಿವರಗಳನ್ನು ಪಡೆದು 15 ದಿವಸಗಳ ಒಳಗಾಗಿ ಸಮಗ್ರ ವಿವರಣಾ ಅಂದಾಜು ಪಟ್ಟಿ ತಯಾರಿಸುವಂತೆ ಸೂಚನೆ ನೀಡಿದ್ದಾರೆ.