Mysore
27
few clouds

Social Media

ಗುರುವಾರ, 16 ಜನವರಿ 2025
Light
Dark

ಮೈಸೂರು : ಮೇಯರ್, ಉಪಮೇಯರ್ ಚುನಾವಣೆಗೆ ದಿನಾಂಕ ಫಿಕ್ಸ್

ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ಮಹಾಪೌರ ಮತ್ತು ಉಪ ಮಹಾಪೌರ ಮೀಸಲಾತಿಯು ನೆನ್ನೆಯಷ್ಟೆ ನಿಗದಿಯಾಗಿತ್ತು. ಇದೀಗ ಚುನಾವಣೆ ದಿನಾಂಕವು ಕೂಡ ಬಿಡುಗಡೆಯಾಗಿದೆ.

ಸೆಪ್ಟೆಂಬರ್ ತಿಂಗಳ 6 ರಂದು ಪಾಲಿಕೆ ನಾಲ್ವಡಿ ಕೃಷ್ಣರಾಜ ಸಭಾಂಗಣದಲ್ಲಿ ಮಧ್ಯಾಹ್ನ 12 ರ ವೇಳೆಗೆ ಚುನಾವಣೆ ನಡೆಸಲಿದ್ದು ಈ ಬಗ್ಗೆ ಪ್ರಾದೇಶಿಕ ಆಯುಕ್ತರಿಂದ ಅಧಿಕೃತ ಆದೇಶ ಬಂದಿದೆ. ಮೇಯರ್ ಚುನಾವಣೆ ಜೊತೆಗೆ ನಾಲ್ಕು ಸ್ಥಾಯಿ ಸಮಿತಿಗಳಿಗೂ ಕೂಡ ಚುನಾವಣೆ ನಡೆಯಲಿದೆ.

ಈ ಬಾರಿ ಸಾಮಾನ್ಯ ವರ್ಗಕ್ಕೆ ಮಹಾಪೌರ, ಹಿಂದುಳಿದ ವರ್ಗ ಎ (ಮಹಿಳೆ) ವರ್ಗಕ್ಕೆ ಉಪ ಮಹಾಪೌರ ಸ್ಥಾನವು ಮೀಸಲಾಗಿದೆ. ರಾಜ್ಯ ಸರ್ಕಾರ ಮೀಸಲಾತಿ ಹೊರಡಿಸಿರುವುದರಿಂದ ಚುನಾವಣಾ ಅಧಿಕಾರಿಗಳು ಆದ ಪ್ರಾದೇಶಿಕ ಆಯುಕ್ತರು ಚುನಾವಣಾ ದಿನಾಂಕವನ್ನು ಇದೀಗ ಪ್ರಕಟಿಸಿದ್ದಾರೆ.

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ