ಮೈಸೂರು : ನಗರದ ಕವಿತಾ ಪ್ರಕಾಶನದ ವತಿಯಿಂದ ಲೇಖಕಿ ಸುಚಿತ್ರಾ ಹೆಗಡೆ ಅವರು ರಚಿಸಿರುವ ‘ಜಗವ ಸುತ್ತುವ ಮಾಯೆ’ ಎಂಬ ಪ್ರವಾಸ ʼಕಥನ ಕೃತಿಯು ಸೆ. 4 ರಂದು ಬಿಡುಗಡೆಗೊಳ್ಳಲಿದೆ.
ನಗರದ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ಕೃತಿ ಬಿಡುಗಡೆಗೊಳ್ಳಲಿದ್ದು, ಕೃತಿ ಬಿಡುಗಡೆಯನ್ನು ಖ್ಯಾತ ಲೇಖಕರು ಹಾಗೂ ಪತ್ರಕರ್ತ ಜೋಗಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಕೃತಿ ಕುರಿತು ಪತ್ರಕರ್ತ ಹಾಗೂ ಪ್ರಕಾಶಕರಾದ ಜಿ.ಎನ್.ಮೋಹನ್ ಮಾತನಾಡಲಿದ್ದಾರೆ. ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ವಹಿಸಿಕೊಳ್ಳಲಿದ್ದಾರೆ ಎಂದು ಕವಿತಾ ಪ್ರಕಾಶನದ ಗಣೇಶ ಅಮೀನಗಡ ಪ್ರಕಟಣೆಯಲ್ಲಿ ತಿಳಿಸುವ ಮೂಲಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಬೇಕೆಂದು ಕೋರಿದ್ದಾರೆ.