Light
Dark

ಮೈಸೂರು ಮೂಲಕ ಹಾದು ಹೋಗಲಿದೆ ರಾಗಾ ಭಾರತ್ ಜೋಡೋ ಅಭಿಯಾನ

ಮೈಸೂರು: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ದೇಶದ 150ಕ್ಕೂ ಹೆಚ್ಚು ಸಂಘಟನೆಗಳ ಜತೆಗೂಡಿ ಹಮ್ಮಿಕೊಳ್ಳಲಿರುವ ಭಾರತ್ ಜೋಡೋ ಅಭಿಯಾನದ ರೂಪುರೇಷೆ ತಯಾರಾಗಿದ್ದು, ಸೆ.7ರಿಂದ ಆರಂಭವಾಗುವ ಯಾತ್ರೆಯು ಮೈಸೂರು ಮೂಲಕವೂ ಹಾದು ಹೋಗಲಿದೆ.

ಸೆ.೭ರಿಂದ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ 150 ದಿನಗಳ, ಸರಿಸುಮಾರು 3500 ಕಿಲೋಮೀಟರ್, 12 ರಾಜ್ಯಗಳ ಮೂಲಕ ಯಾತ್ರೆ ಹಾದು ಹೋಗಲಿದೆ. ಯಾತ್ರೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಯೋಗೇಂದ್ರ ಯಾದವ್, ಅರುಣಾ ರಾಯ ಸಹಿತ ಅನೇಕ ಸಾಮಾಜಿಕ ಹೋರಾಟಗಾರರು, ಸಂಘಟನೆಗಳು ಪಾಲ್ಗೊಳ್ಳಲಿವೆ. ಈ ಯಾತ್ರೆಯು 12 ರಾಜ್ಯಗಳು, ಎರಡು ಯೂನಿಯನ್ ಟೆರಟರಿ ಮೂಲಕ ಹಾದು ಹೋಗಲಿದೆ.

ಅದರಲ್ಲಿ ಪ್ರಮುಖವಾಗಿ ಕನ್ಯಾಕುಮಾರಿ, ತಿರುವನಂತಪುರಂ, ಕೊಚ್ಚಿನ್, ನೀಲಂಬೂರು, ಮೈಸೂರು, ಬಳ್ಳಾರಿ, ರಾಯಚೂರು, ವಿಕರಾಬಾದ್, ನಂದೇಡ್, ಜಲ್ಗನ್ ಜಾಮೋದ್, ಇಂದೋರ್, ಕೋಟಾ, ಡುಸಾ, ಅಲ್ವಾರ್, ಭುಲಂದೇಶ್ವರ್, ದಿಲ್ಲಿ, ಅಂಬಲ, ಪಠಾಣ್‌ಕೋಟ್, ಜಮ್ಮು, ಶ್ರೀನಗರದಲ್ಲಿ ಮುಕ್ತಾಯವಾಗಲಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ