Mysore
24
mist

Social Media

ಬುಧವಾರ, 31 ಡಿಸೆಂಬರ್ 2025
Light
Dark

ಮೈಸೂರಿನ ಹಲವು ಕಂಪನಿಗಳಿಂದ ₹10 ಸಾವಿರ ಕೋಟಿ ವಹಿವಾಟು ಸಾಧನೆ : ಅಶ್ವತ್ಥ್​ ನಾರಾಯಣ್​

ಮೈಸೂರು: ಮೈಸೂರಿನಲ್ಲಿ ಇಎಸ್ಡಿಎಂ ವಲಯದ 230 ಕಂಪನಿಗಳು ಈಗಾಗಲೇ ಸ್ಥಾಪನೆಯಾಗಿದ್ದು, ವರ್ಷಕ್ಕೆ 10,000 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿವೆ ಎಂದು ಸಚಿವ ಡಾ ಸಿ ಎನ್ ಅಶ್ವತ್ಥನಾರಾಯಣ ಹೇಳಿದರು.
ನವೆಂಬರ್‌ನಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಬಿಗ್ ಟೆಕ್ ಶೋ ಕಾರ್ಯಕ್ರಮದಲ್ಲಿ ಅವರು ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದರು.ಕಳೆದ ಹತ್ತು ತಿಂಗಳಲ್ಲಿ ಮೈಸೂರಿನಲ್ಲಿ ಏಳು ಕಂಪನಿಗಳು ಕಾರ್ಯಾರಂಭಿಸಿವೆ.
1,400 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿರುವ ಇನ್ನೂ 7 ಕಂಪನಿಗಳ ಪ್ರಸ್ತಾವನೆಗಳು ಸರ್ಕಾರದ ಮುಂದಿವೆ. ಇವು 12,000 ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದು ಸದ್ಯದಲ್ಲೇ ಒಪ್ಪಿಗೆ ನೀಡಲಾಗುವುದು ಎಂದರು.
ಐಟಿ ಬಿಟಿ ಸಚಿವ ಅಶ್ವತ್ಥ್​ ನಾರಾಯಣ್ ಅವರು ಮಾತನಾಡಿದರುನವೋದ್ಯಮ ಸ್ಥಾಪನೆ: ಮೈಸೂರಿನಲ್ಲಿ ಮುಂದಿನ ಒಂದು ವರ್ಷದಲ್ಲಿ ವಿದ್ಯಾರ್ಥಿಗಳೇ ನೇತೃತ್ವ ವಹಿಸಲಿರುವ 500 ನವೋದ್ಯಮಗಳನ್ನು ಸ್ಥಾಪಿಸಲಾಗುವುದು.

ಇದಲ್ಲದೆ ಸ್ಟಾರ್ಟ್ ಅಪ್ ಹಬ್ ಮುಖಾಂತರ ಈ ಕಂಪನಿಗಳನ್ನು ಬೆಸೆಯಲಾಗುವುದು. ಸೆಮಿಕಂಡಕ್ಟರ್ ಫ್ಯಾಬ್ ವಲಯಕ್ಕೆ ಇಲ್ಲಿ ಈಗಾಗಲೇ 200 ಎಕರೆ ಭೂಮಿ ನೀಡಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ 250 ಎಕರೆ ಭೂಮಿ ಮೀಸಲಿಡಲಾಗಿದೆ ಎಂದು ತಿಳಿಸಿದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!