ಚಾಮರಾಜನಗರ: ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಕಪ್ಪುಕಲ್ಲು ಕ್ವಾರಿ ಖರೀದಿ ಸಂಬAಧ ಮಾಲೀಕರಿಗೆ ನೀಡಿದ ೯ ಕೋಟಿ ರೂ.ಗಳ ಮೂಲ ಯಾವುದು ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಕಾಡಾಧ್ಯಕ್ಷ ನಿಜಗುಣರಾಜು ಒತ್ತಾಯಿಸಿದ್ದಾರೆ.
ತೆರಕಣಾಂಬಿ ಗ್ರಾಮದ ಬಳಿ ೮.೨೦ ಎಕರೆ ಕಪ್ಪುಕಲ್ಲು ಕ್ವಾರಿ ಖರೀದಿಸಿದಾಗ ಇಬ್ಬರು ಮಾಲೀಕರಿಗೆ ಒಟ್ಟು ೯ ಕೋಟಿ ರೂ. ನೀಡಿದ್ದಾಗಿ ಶಾಸಕರು ಹೇಳಿಕೆ ನೀಡಿದ್ದಾರೆ. ೨೦೧೮ರಲ್ಲಿ ಚುನಾವಣೆ ಸ್ಪರ್ಧಿಸುವಾಗ ಇವರು ೩.೫೦ ಕೋಟಿ ರೂ. ಆಸ್ತಿ ಘೋಷಿಸಿದ್ದರು. ಈಗ ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ನನ್ನ ವಿರುದ್ಧ ಬಿಜೆಪಿಯವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂಬ ಶಾಸಕರ ಆರೋಪದಲ್ಲಿ ಹುರುಳಿಲ್ಲ. ೨೫ ಲಕ್ಷ ರೂ. ತನಕ ಮಾತ್ರ ನಗದು ವಹಿವಾಟು ಮಾಡಬೇಕಿದೆ. ಆದರೆ, ಶಾಸಕರು ಕೋಟ್ಯಂತರ ರೂ. ನೀಡಿರುವುದಾಗಿ ಹೇಳಿದ್ದಾರೆ. ಈ ಹಣ ಯಾವ ಖಾತೆಯಿಂದ ನೀಡಿದರೆಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದರು.
೯ ಕೋಟಿ ರೂ. ನೀಡಿಕೆ ಬಗ್ಗೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಾಗುವುದು. ಅಲ್ಲದೆ ಪತ್ರ ಚಳವಳಿ ನಡೆಸಲಾಗುವುದು ಎಂದು ತಿಳಿಸಿದರು.
ಶಾಸಕರ ಕುಟುಂಬದವರು ಯಳಂದೂರು ತಾಲ್ಲೂಕಿನ ಗುಂಬಳ್ಳಿ ಬಳಿ ೧೫ ಎಕರೆ ಕಪ್ಪುಕ್ವಾರಿ ಹೊಂದಿದ್ದಾರೆ. ಉಪ್ಪಿನಮೋಳೆ ಗ್ರಾಮದಲ್ಲಿರುವ ಶಾಸಕರ ಮನೆ ಸಮೀಪವೇ ಹೊಸದಾಗಿ ಪೆಟ್ರೋಲ್ ಬಂಕ್ ತೆರೆಯಲಾಗಿದೆ. ಚಾಮರಾಜನಗರದ ನ್ಯಾಯಾಲಯ ರಸ್ತೆಯಲ್ಲಿ ಐಷರಾಮಿ ಮನೆ ಹೊಂದಿದ್ದಾರೆ. ಈ ಎಲ್ಲ ಆಸ್ತಿಯನ್ನು ಯಾವ ವಹಿವಾಟಿನಿಂದ ಮಾಡಿದ್ದಾರೆ ಎಂದರು.
ಸುವರ್ಣಾವತಿ ಜಲಾಶಯದ ಬಳಿ ಬಿ.ರಾಚಯ್ಯ ಪ್ರತಿಮೆ ನಿರ್ಮಾಣಕ್ಕೆ ಅನುಮೋದನೆಗಾಗಿ ತಾಂತ್ರಿಕ ಅನುಮೋದನೆಗೆ ಕಳುಹಿಸಲಾಗಿದೆ. ಹಲವು ಗ್ರಾಮಗಳಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆಯದೆಯೇ ಶಾಸಕರು ಕಾಮಗಾರಿಗೆ ಚಾಲನೆ ನೀಡಿದ್ದಾರೆ. ನಾನೇನು ಹಾಗೆ ಮಾಡುವುದಿಲ್ಲ ಎಂದರು.
ಕಾಡಾಧ್ಯಕ್ಷರಾಗಿ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ರಸ್ತೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಅವರಿಂದ ಅನುದಾನ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದೇನೆ. ನಮಗೂ ರಸ್ತೆ ಮಾಡಿಸಲು ಅವಕಾಶವಿದೆ ಎಂದು ತಿಳಿಸಿದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
ಶಾಸಕರು ನೀಡಿದ 9 ಕೋಟಿ ರೂ. ಮೂಲ ಯಾವುದು ? ಸುದ್ದಿಗೋಷ್ಠಿಯಲ್ಲಿ ನಿಜಗುಣರಾಜು ಪ್ರಶ್ನೆ
Previous Articleಮಡಿಕೇರಿಯ ರಾಜಾ ಸೀಟಿಗೆ ಈಗ ಹೊಸ ರಾಜ ಕಳೆ