Mysore
23
overcast clouds

Social Media

ಗುರುವಾರ, 11 ಜೂನ್ 2026
Light
Dark

MCF ಪ್ರೇರಣಾ ಯೋಜನೆಗಳಡಿ ಅರ್ಜಿ ಆಹ್ವಾನ

ಮೈಸೂರು : (ಕರ್ನಾಟಕ ವಾರ್ತೆ) ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಬರುವ ಜನಾಂಗದ ಫಲಾಪೇಕ್ಷಿಗಳಿಗೆ ನಿಗಮದಿಂದ ಅನುಷ್ಟಾನಗೊಳಿಸುತ್ತಿರುವ ಐ.ಎಸ್.ಬಿ ಯೋಜನೆ (ಇ.ಎ ಮತ್ತು ಇತರೆ ದ್ವಿಚಕ್ರ ವಾಹನ ಖರೀದಿ/ತ್ರಿಚಕ್ರ ಸರಕು ಸಾಗಾಣಿಕೆ ವಾಹನ ಖರೀದಿ, ಚಟುವಟಿಕೆಗಳಿಗೆ ಬ್ಯಾಂಕುಗಳ ಸಹಯೋಗದೊಂದಿಗೆ) ಹಾಗೂ ಎಂ.ಸಿ.ಎಫ್ ಪ್ರೇರಣಾ ಯೋಜನೆಗಳಡಿ (ಮಹಿಳಾ ಸ್ವ-ಸಹಾಯ ಸಂಘಗಳಿಗೆ ೨೦೨೨-೨೩ನೇ ಸಾಲಿನ ಗುರಿಗೆ ಅರ್ಜಿಯನ್ನು  ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಿದ ಫಲಾಪೇಕ್ಷಿಗಳ ಅರ್ಜಿಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿರುವ ಆಯ್ಕೆ ಸಮಿತಿಯ ಮೂಲಕ ಗುರಿಗನುಗುಣವಾಗಿ ಫಲಾಪೇಕ್ಷಿಗಳನ್ನುಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸರಸ್ವತಿಪುರಂ ನಲ್ಲಿರುವ ಜಿಲ್ಲಾ ವ್ಯವಸ್ಥಾಪಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!