ಸೋಮವಾರಪೇಟೆ: ಬೆಂಗಳೂರಿನಲ್ಲಿ ವಾಸವಾಗಿದ್ದ ಪಟ್ಟಣದ ಮಸಗೋಡು ಗ್ರಾಮದ ಎಂ.ಎಸ್. ಶಿವಣ್ಣ ಎಂಬುವರ ಪುತ್ರಿ ಶ್ವೇತಾ (28) ನೇಣು ಬಿಗಿದುಕೊಂಡು ಸಾವಿಗೀಡಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶ್ವೇತಾ ಅವರಿಗೆ ಕಳೆದ 11 ತಿಂಗಳ ಹಿಂದೆಯಷ್ಟೆ ಅಭಿಷೇಕ್ ಎಂಬುವವರ ಜೊತೆಗೆ ವಿವಾಹವಾಗಿತ್ತು. ವಿವಾಹದ ನಂತರ ಪತಿ ಹಾಗೂ ಪತ್ನಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ ಶನಿವಾರ ಬೆಳಿಗ್ಗೆ ಸುಮಾರು ೪ ಗಂಟೆಯಲ್ಲಿ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ.