Mysore
27
few clouds

Social Media

ಗುರುವಾರ, 16 ಜನವರಿ 2025
Light
Dark

ಮರಿಮಲ್ಲಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪರ್ವತರಾಜು ನಿಧನ

ಮೈಸೂರು : ಪಟ್ಟಣದ ಮರಿಮಲ್ಲಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಬಿಎಸ್ ಪರ್ವತರಾಜು ಅವರು ಇಂದು ನಿಧನರಾಗಿದ್ದಾರೆ.

67 ವರ್ಷದ ಪರ್ವತರಾಜು ಅವರು ಮರಿಮಲ್ಲಪ್ಪ ಕಾಲೇಜಿನಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಮೃತರಿಗೆ ಪತ್ನಿ ಸುಮನ, ಪುತ್ರ ಪ್ರತ್ಯೂಷ್, ಸೊಸೆ ಉಜ್ವಲ ಹಾಗೂ ಅಪಾರ ಶಿಷ್ಯವರ್ಗವನ್ನು ಬಂಧು ಬಳಗ ಇದ್ದು ಇವರನ್ನು ಅಗಲಿದ್ದಾರೆ.

ಪುತ್ರ ಅಮೇರಿಕಾದ ಭಾಸ್ಟನ್ನಲ್ಲಿ ವೃತ್ತಿಯಲ್ಲಿ ಇದ್ದು ಅವರು ಮಂಗಳವಾರ ಬೆಳಿಗ್ಗೆ ಆಗಮಿಸಲಿದ್ದಾರೆ. ಆದಕಾರಣ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 6 -9 -22ರ ಮಂಗಳವಾರ ಅಂತ್ಯಕ್ರಿಯೆಯನ್ನು ನಡೆಸಲಾಗುವುದು. ಎಂದು ಕುಟುಂಬದ ಮೂಲಗಳು ತಿಳಿಸಿದೆ.

ಅಂತಿಮ ದರ್ಶನಕ್ಕೆ ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆವರೆಗೆ ಅವರ ಸ್ವಗೃಹದಲ್ಲಿ ಇರಿಸಲಾಗುವುದು. ಅವರ ಮನೆ ನಂಬರ್ 28/A A&B ಬ್ಲಾಕ್ ರಾಮಕೃಷ್ಣನಗರ ಮೈಸೂರು. ಇಲ್ಲಿ ಇರಿಸಲಾಗುತ್ತದೆ. ನಂತರ ವಿದ್ಯಾರಣ್ಯಪುರಂ ವೀರಶೈವ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗುತ್ತದೆ ಎಂದು ಅವರ ಕುಟುಂಬ ತಿಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ