ಮದ್ದೂರು : ಪಟ್ಟಣದಲ್ಲಿನ ಡಿ೨ ಡಯಾಗ್ನೋಸ್ಟಿಕ್ ಸೆಂಟರ್‌ಗೆ ತಹಸಿಲ್ದಾರ್ ಪರಶುರಾಮ ಸತ್ತಿಗೇರಿ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಅನಿರೀಕ್ಷಿತ ಭೇಟಿನೀಡಿ ಸ್ಕ್ಯಾನಿಂಗ್ ಸೆಂಟರ್‌ನ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಸ್ಕ್ಯಾನಿಂಗ್ ಮಾಡಿಸಿರುವ ಗರ್ಭಿಣಿ ಮಹಿಳೆಯರ ದಾಖಲೆಗಳು ಮತ್ತು ಫಾರಂಗಳನ್ನು ಪರಿಶೀಲನೆ ನಡೆಸಿದರು. ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಸಮರ್ಪಕವಾಗಿ ಜಾರಿ ಮತ್ತು ಅನುಷ್ಠಾನಗೊಳಿಸಬೇಕು, ಗರ್ಭಿಣಿ ಮಹಿಳೆ ಹಾಗೂ ಬರುವ ಪೋಷಕರಿಗೆ ಜಾಗೃತಿ ಮೂಡಿಸಲು ಹಾಗೂ ಎಚ್ಚರಿಕೆ ನೀಡಿಲು ಶಿಕ್ಷೆ, ದಂಡ ಹಾಗು ಹೆಣ್ಣು ಮಕ್ಕಳ ಮಹತ್ವ, ಲಿಂಗಪತ್ತೆ ಕಾನೂನು ಬಾಹಿರ ಎಂದು ಸಾರುವ ಸೂಚನಾ ಫಲಕಗಳನ್ನು ಸ್ಥಳೀಯ ಬಾಷೆಯಲ್ಲಿ ದೊಡ್ಡ ಗಾತ್ರದಲ್ಲಿ ಪ್ರದರ್ಶನ ಮಾಡಲು ಸೂಚಿಸಿದರು.
ದಾಖಲೆಗಳನ್ನು ಕಡ್ಡಾಯವಾಗಿ ಎರಡು ವರ್ಷಗಳವರೆಗೆ ಇಟ್ಟಿರಬೇಕು, ಬಾಲ ಗರ್ಭಿಣಿ ಬಂದಂತಹ ಸಂದರ್ಭದಲ್ಲಿ ತಾಲ್ಲೂಕು ಆಡಳಿತಕ್ಕೆ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಮುಂದಿನ ಕ್ರಮಕ್ಕಾಗಿ ಕಡ್ಡಾಯವಾಗಿ ತಿಳಿಸುವಂತೆ ಸೂಚಿಸಿದರು. ಪ್ರತಿ ಮೂರು ತಿಂಗಳಿಗೊಮ್ಮೆ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಲಾಗುವುದು. ಕಾನುನು ಉಲ್ಲಂಘನೆ ಮಾಡಿದರೆ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಕ್ರಮ ಕೈಗೊಳುತ್ತೇವೆ ಎಂದು ಎಚ್ಚರಿಸಿದರು.
ತಪಾಸಣೆ ವೇಳೆ ತಹಸಿಲ್ದಾರ್ ಪರಶುರಾಮ್ ಸತ್ತಿಗೇರಿ, ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಶಂಕರ್, ಡಿ೨ ಸ್ಕ್ಯಾನಿಂಗ್ ಸೆಂಟರ್ ಮಾಲೀಕರಾದ ಡಾ.ದೀಪಕ್ ಗೌತಮ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.




