Mysore
25
overcast clouds
Light
Dark

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ; ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿದ ಹೈ

ಮಂಡ್ಯ/ಬೆಂಗಳೂರು: ಶ್ರೀರಂಗಪಟ್ಟಣದ ಮುಡಬಾಗಿಲು ಆಂಜನೇಯ ಸ್ವಾಮಿ ದೇವಾಲಯ ದ್ವಂಸಗೊಳಿಸಿ ಅಲ್ಲಿ ಜಾಮಿಯಾ ಮಸೀದಿ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಉತ್ಖನನ ನಡೆಸಿ ವರದಿ ನೀಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯಕ್ಕೆ ನಿರ್ದೇಶಿಸಬೇಕು ಎಂದು ಹೂಡಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ ಹಾಗೂ ಪುರಾತತ್ವ ಇಲಾಖೆಗೆ ಹೈಕೋರ್ಟ್‌ ನೋಟಿಸ್‌ ನೀಡಿದೆ.

ಜಿಲ್ಲೆಯ ಹಾಲನಹಳ್ಳಿ ಭಜರಂಗ ಸೇನೆಯ ರಾಜ್ಯ ಘಟಕ ಅಧ್ಯಕ್ಷ ಸಲ್ಲಿಸಿರುವ ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನು ಎನ್‌.ವಿ ಅಂಜಾರೀಯಾ ನೇತೃತ್ವದ ವಿಭಾಗೀಯ ಪೀಠ ಅಂಗೀಕರಿಸಿ, ವಾದ-ವಿವಾದ ಆಲಿಸಿ ಈ ನೋಟಿಸ್‌ ನೀಡಲು ಆದೇಶಿಸಿತು. ಮತ್ತು ಈ ವಿಚಾರಣೆಯನ್ನು ಜುಲೈ. 11ಕ್ಕೆ ಮುಂದೂಡಲಾಯಿತು.

ಈ ಅರ್ಜಿಯಲ್ಲಿ ಮೂಡಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯ, ಮೈಸೂರು ಅರಸರು ಪೋಷಿಸುತ್ತಾ ಬಂದಿದ್ದರು. ಈ ದೇವಾಲಯವನ್ನು ಟಿಪ್ಪು ತನ್ನ ಅಧಿಕಾರಾವಧಿಯಲ್ಲಿ ದ್ವಂಸ ಮಾಡಿ ಬಳಿಕ ಅದೇ ಜಾಗದಲ್ಲಿ ಜಾಮೀಯಾ ಮಸೀದಿಯನ್ನು ನಿರ್ಮಿಸಿದ್ದರು ಎಂದು ಅರ್ಜಿಯಲ್ಲಿ ಅಕ್ಷೇಪಿಸಿದ್ದರು. ಈ ಸಂಬಂಧ ನ್ಯಾಯಾಲಯ ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿದ್ದರು.