Mysore
29
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಸಕ್ಕರೆನಾಡು ಮಂಡ್ಯದಲ್ಲಿ ಅವಿವಾಹಿತ ಯುವಕರ ವಿಚಿತ್ರ ಪ್ರಕರಣ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಅವಿವಾಹಿತ ಯುವಕರ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪಂಚಾಯಿತಿ ವತಿಯಿಂದ ನಮಗೆ ಮಠ ಕಟ್ಟಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮರಳಿಗ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದುವೆಯಾಗಲು ಹೆಣ್ಣು ಸಿಗದೆ ಹತಾಶೆಗೊಳಗಾಗ ಯುವಕರು ಗ್ರಾಮದಲ್ಲಿ ಮಠ ಕಟ್ಟಿಸಿಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಇದನ್ನು ಓದಿ: ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಸಮಾಧಿ ನಾಮಫಲಕ ಧ್ವಂಸ

ಗ್ರಾಮದಲ್ಲಿ ಮದುವೆಯಾಗದ 30ಕ್ಕೂ ಹೆಚ್ಚು ಯುವಕರು ತಮ್ಮೂರಿನ ಪಂಚಾಯ್ತಿಯ ಗ್ರಾಮಸಭೆಗೆ ಬೇಡಿಕೆ ಪತ್ರ ಬರೆದಿದ್ದಾರೆ.

ಪ್ರಸನ್ನ ಎಂಬ ಯುವಕನ ನೇತೃತ್ವದಲ್ಲಿ ಪಂಚಾಯ್ತಿಗೆ ಅರ್ಜಿ ಬರೆದು ಮಠಕ್ಕೆ ಮನವಿ ಸಲ್ಲಿಸಲಾಗಿದ್ದು, ಅವಿವಾಹಿತ ಯುವಕರ ಈ ವಿಚಿತ್ರ ಅರ್ಜಿಯನ್ನು ಕಂಡು ಸದಸ್ಯರು ಹಾಗು ಅಧಿಕಾರಿಗಳು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಈ ಮನವಿಯನ್ನು ತಹಶೀಲ್ದಾರ್ ಗಮನಕ್ಕೆ ತರುವುದಾಗಿ ಪಂಚಾಯಿತಿ ಪಿಡಿಓ ತಿಳಿಸಿದ್ದಾರೆ.

ಇನ್ನು ತಮ್ಮೂರಿನ ಗಂಡು ಮಕ್ಕಳ ಹತಾಶೆ ಸ್ಥಿತಿಗೆ ಕಂಗಾಲಾಗಿರುವ ಮಕ್ಕಳ ಪೋಷಕರು, ರೈತ ಕುಟುಂಬದ ಗಂಡು ಮಕ್ಕಳಿಗೆ ಹೆಣ್ಣು ಕೊಡದ ಸ್ಥಿತಿಗೆ ಬಂದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

Tags:
error: Content is protected !!