Mysore
23
overcast clouds
Light
Dark

SSLC Results 2024: ಫೇಲಾದ ನೋವಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಮದ್ದೂರು: ಇಂದು ( ಮೇ 9 ) ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಮದ್ದೂರು ತಾಲೂಕಿನ ತಗ್ಗಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗ್ರಾಮದ ಮಹದೇವ್ ಅವರ ಮಗ ನಿಖಿಲ್ (16) ಎಂಬ ವಿದ್ಯಾರ್ಥಿ 3 ವಿಷಯಗಳಲ್ಲಿ ಅನುತ್ತೀರ್ಣನಾದ ಹಿನ್ನೆಲೆಯಲ್ಲಿ ಮನನೊಂದು ತಮ್ಮ ಹೊಲದಲ್ಲಿ 12 ಗಂಟೆ ಸಮಯಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕುಟುಂಬದ ರೋಧನ ಮುಗಿಲುಮುಟ್ಟಿದ್ದು, ಮೃತ ವಿದ್ಯಾರ್ಥಿ ಪೋಷಕರ ಎರಡನೇ ಮಗನಾಗಿದ್ದು ಈತ ಆತ್ಮಹತ್ಯೆಗೆ ಶರಣಾಗಿರುವುದು ಕುಟುಂಬದ ದುಃಖಕ್ಕೆ ಕಾರಣವಾಗಿದೆ. ಬದುಕಿದ್ದರೆ ಎಷ್ಟು ಬಾರಿಯಾದರೂ ಪರೀಕ್ಷೆ ಬರೆದು ಪಾಸ್ ಮಾಡಿ ಬೇರೆ ಏನಾದರೂ ಮಾಡಬಹುದಿತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಅಗಲಿದ ನಿಖಿಲ್‌ನನ್ನು ನೆನೆದು ಕಣ್ಣೀರು ಹಾಕಿದ್ದಾರೆ.

 

Disclaimer: ಯಾವುದೇ ಸಮಸ್ಯೆಗೂ ಅತ್ಮಹತ್ಯೆ ಒಂದೇ ಪರಿಹಾರವಲ್ಲ. ನಿಮ್ಮ ತೊಂದರೆಗಳನ್ನು ಆತ್ಮೀಯರ ಜತೆ ಹಂಚಿಕೊಳ್ಳಿ. ಇಲ್ಲವಾದರೆ ಈ ಸಹಾಯವಾಣಿಗೆ ಕರೆಮಾಡಿ ಮಾತನಾಡಿ: 9152987821