ಮಂಡ್ಯ: ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳಾದ ಶೇಕ್ ತನ್ವೀರ್ ಆಸಿಫ್ ಮಂಗಳವಾರ(ಆ.3) ಶ್ರೀರಂಗಪಟ್ಟಣ ತಾಲೂಕು ಕಿರಂಗೂರು ಬನ್ನಿಮಂಟಪಕ್ಕೆ ಭೇಟಿ ನೀಡಿ ದಸರಾ ಹಬ್ಬದ ಪೂರ್ವ ತಯಾರಿ ಬಗ್ಗೆ ಪರಿವೀಕ್ಷಣೆ ನಡೆಸಿದರು.
ಅಕ್ಟೋಬರ್ ಮಾಹೆಯಲ್ಲಿ ಶ್ರೀರಂಗಪಟ್ಟಣ ದಸರಾ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ದಸರಾ ಉದ್ಘಾಟನೆಯಾಗಲಿರುವ ಬನ್ನಿಮಂಟಪ ಆವರಣದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಿ. ಅಲ್ಲದೆ ಐತಿಹಾಸಿಕ ಕೊಳಕ್ಕೆ ಸುಣ್ಣಬಣ್ಣ ಮಾಡಿಸುವುದು ಮಂಟಪದ ಮುಂದಿನ ಭಾಗದಲ್ಲಿ ಗೇಟ್ ಹಾಗೂ ಬೇಲಿಯನ್ನು ಅಳವಡಿಸುವುದು ಹಾಗೂ ನೀರಿನ ವ್ಯವಸ್ಥೆ ಮಾಡಲು ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಟಿ.ಎ.ಪ್ರಶಾಂತ್ ಬಾಬು ರವರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಎ.ಬಿ ವೇಣು ಹಾಗೂ ಸಹಾಯಕ ನಿರ್ದೇಶಕರಾದ ಮೃತ್ಯುಂಜಯ ಹಾಜರಿದ್ದರು.