Mysore
24
overcast clouds

Social Media

ಶುಕ್ರವಾರ, 18 ಏಪ್ರಿಲ 2025
Light
Dark

ಮತ್ತೆ ಮುನ್ನೆಲೆಗೆ ಬಂತು ಶ್ರೀರಂಗಪಟ್ಟಣ ಜಾಮೀಯಾ ಮಸೀದಿ ವಿವಾದ : ಹೈಕೋರ್ಟ್ ನಲ್ಲಿ ನಾಳೆ ವಿಚಾರಣೆ

ಮಂಡ್ಯ : ಮತ್ತೆ ಶ್ರೀರಂಗಪಟ್ಟಣ ಜಾಮೀಯಾ ಮಸೀದಿ ವಿವಾದ ಮುನ್ನೆಲೆಗೆ ಬಂದಿದ್ದು, ನಾಳೆ ಹೈ ಕೋರ್ಟ್‌ ನಲ್ಲಿ ವಿಚಾರಣೆ ನಡೆಯಲಿದೆ.

ಈ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ವಿವಾದ ಇಂದು ನಿನ್ನೆಯದ್ದು ಅಲ್ಲ. ಹಲವು ವರ್ಷಗಳಿಂದಲೂ ಈ ವಿವಾದ ಕೇಳಿ ಬರುತ್ತಲೆ ಇದೆ. ಟಿಪ್ಪು ಸುಲ್ತಾನ್‌ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ಕೆಡವಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಮತ್ತೆ ಮಸೀದಿ ಜಾಗದಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ನಿರ್ಮಾಣ ಮಾಡಬೇಕೆಂದು ಹಲವು ವರ್ಷಗಳಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಹನುಮಂತ ಭಕ್ತರು ಪ್ರತಿಭಟನೆ ನಡೆಸಿದ್ದರು.  ಇದೀಗ ಭಜರಂಗ ಸೇನೆ ೧೦೧ ಹನುಮ ಭಕ್ತರ ಮೂಲಕ ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ.

ಇಷ್ಟು ದಿನ ಪ್ರತಿಭಟನೆ ಮೂಲಕ ಹೋರಾಡುತ್ತಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಇದೀಗ ನ್ಯಾಯಾಲಯದ ಮೊರೆ ಹೋಗಿದ್ದಾರೆ.  ಜಾಮೀಯಾ ಮಸೀದಿ ಒಂದು ಮಸೀದಿಯಲ್ಲ. ಇದು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ . ಈ ದೇವಸ್ಥಾನವನ್ನು ಕೆಡವಿ ಟಿಪ್ಪು ಸುಲ್ತಾನ್‌ ಜಮೀಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ. ಇದು ದೇವಸ್ಥಾನ ಎನ್ನಲು ಹಿಂದೂ ದೇವಸ್ಥಾನಗಳ ಕಲ್ಲುಗಳು, ಕೆತ್ತನೆಗಳು, ಅಲ್ಲದೆ ಮಸೀದಿಯ ಒಳಭಾಗದಲ್ಲಿಯೇ ಹಿಂದೂ ದೇವಸ್ಥಾನದ ಕಲ್ಯಾಣಿ ಹಾಗೂ ಗೋಪುರದಲ್ಲಿ ಕಳಶಗಳೇ ಸಾಕ್ಷಿ. ಇವೇ ಸಾಕು ಇದು ಮಸೀದಿಯಲ್ಲ ಮಂದಿರ ಎಂದು ರೂಪಿಸುತ್ತವೆ. ಹೋಗಾಗಿ ಜಾಮೀಯಾ ಮಸೀದಿಯ ಜಾಗದಲ್ಲಿ ಮೊದಲು ಇದ್ದ ಮೂಡಲ ಆಂಜನೇಯಸ್ವಾಮಿ ದೇವಸ್ಥಾನ ಸ್ಫಾಪನೆಗೆ ಸರ್ವೇ ನಡೆಸಿ ಅವಕಾಶ ಕಲ್ಪಿಸಿಕೊಡಬೇಕೆಂದು ಭಜರಂಗ ಸೇನೆ ಹೈಕೋರ್ಟ್‌ ನಲ್ಲಿ ದಾವೆ ಹೂಡಿದೆ.

ಇನ್ನು ಈ ಕೇಸ್‌ ಅನ್ನು ಹೈಕೋರ್ಟ್‌ ಫೈಲ್‌ ಮಾಡಿಕೊಂಡಿದ್ದು, ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಂಡ್ಯ ಡಿಸಿ, ವಕ್ಫ್‌ ಹಾಗೂ ಧಾರ್ಮಿಕ ದತ್ತಿ ಇಲಾಖೆಗಳಿಗೆ ಕೋರ್ಟ್‌ ನೋಟಿಸ್‌ ನೀಡಿದೆ. ಈ ಕೇಸ್‌ ಸಂಬಂಧ ಮೊದಲ ವಾದ ಪ್ರತಿವಾದಗಳು ನಾಳೆ ನಡೆಯಲಿದೆ. ಈಗಾಗಲೇ ಎಲ್ಲಾ ಇಲಾಖೆಯ ಮುಖ್ಯಸ್ಥರು ಕೋರ್ಟ್‌ ಗೆ ಬರುವಂತೆ ನ್ಯಾಯಾಧೀಶರು ಕೋರಿದ್ದಾರೆ.

Tags: