Mysore
34
scattered clouds

Social Media

ಸೋಮವಾರ, 30 ಮಾರ್ಚ್ 2026
Light
Dark

ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ

ಶ್ರೀರಂಗಪಟ್ಟಣ: ಹನುಮ ಜಯಂತಿ ಆಚರಣೆ ಎಲ್ಲೆಡೆ ನಡೆಯುತ್ತಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ತುಸು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಇಂದು ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಬೃಹತ್‌ ಸಂಕೀರ್ತನಾ ಯಾತ್ರೆ ನಡೆಯಿತು.

ನಿಮಿಷಾಂಬ ದೇವಾಲಯದಿಂದ ಜಾಮೀಯಾ ಮಸೀದಿ ಮುಂಭಾಗದ ರಂಗನಾಥಸ್ವಾಮಿ ದೇವಾಲಯದ ತನಕ ಯಾತ್ರೆ ನಡೆಯಿತು.

ಇದನ್ನು ಓದಿ: ನಟ ದರ್ಶನ್‌ ಅಂಡ್‌ ಗ್ಯಾಂಗ್‌ಗೆ ಮತ್ತೊಂದು ಶಾಕ್‌

ಯಾತ್ರೆಯಲ್ಲಿ ಮೈಸೂರು, ಕೊಡಗು, ಹಾಸನ, ರಾಮನಗರ ಜಿಲ್ಲೆಗಳಿಂದಲೂ ಹನುಮ ಮಾಲಾಧಾರಿಗಳು ಬಂದಿದ್ದರು.

ಈ ವೇಳೆ ಹನುಮ ಮಾಲಾಧಾರಿಗಳು ಜಾಮೀನು ಮಸೀದಿಗೆ ನುಗ್ಗಲು ಯತ್ನಿಸಿದ ಘಟನೆ ನಡೆಯುತು. ಕಾರ್ಯಪ್ರವೃತ್ತರಾದ ಪೊಲೀಸರು ಹನುಮ ಮಾಲಾಧಾರಿಗಳನ್ನು ತಡೆದು ಮುಂದಕ್ಕೆ ಕಳುಹಿಸಿದರು.

ಸಂಕೀರ್ತನಾ ಯಾತ್ರೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶ್ರೀರಂಗಪಟ್ಟಣದಾದ್ಯಂತ 1000ಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

Tags:
error: Content is protected !!