ಮಂಡ್ಯ: ಪ್ರಚೋದನಕಾರಿ ಭಾಷಣ ಮಾಡಿದ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ಠಾಣೆಯಲ್ಲಿ ಎಂಎಲ್‌ಸಿ ಸಿ.ಟಿ.ರವಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಿನ್ನೆ ಮದ್ದೂರಿನಲ್ಲಿ ಸಾಮೂಹಿಕ ಗಣಪತಿ ವಿಸರ್ಜನೆ ವೇಳೆ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಅವರು ಆಕ್ಷೇಪಾರ್ಹ, ಪ್ರಚೋದನಕಾರಿ ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪಿಎಸ್‌ಐ ಮಂಜುನಾಥ್ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.
ನಿನ್ನೆ ಮದ್ದೂರಿನಲ್ಲಿ ಎಂಎಲ್‌ಸಿ ಸಿ.ಟಿ.ರವಿ ಅವರು ಮುಸ್ಲಿಮರ ಶಿರಚ್ಚೇಧ ಮಾಡುವುದಾಗಿ ಬೆದರಿಕೆ ಹಾಕುವುದರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ವಿವಾದವನ್ನು ಹುಟ್ಟು ಹಾಕಿದ್ದರು.
ನಮ್ಮ ಮೇಲೆ ಕಲ್ಲು ಎಸೆದವರನ್ನು ಸಮಾಧಿ ಮಾಡುವ ಅಧಿಕಾರ ನಮಗಿದೆ. ಹಿಂದೂ ಸಮಾಜಕ್ಕೆ ಆ ಅಧಿಕಾರವಿದೆ. ನಾವು ಟಿಪ್ಪು ಮತ್ತು ಅವನ ತಂದೆಯನ್ನು ಬಿಡಲಿಲ್ಲ. ನೀವು ತೊಡೆ ತಟ್ಟಿ ನಮಗೆ ಸವಾಲು ಹಾಕಬೇಡಿ. ನಾವು ನಿಮ್ಮ ತೊಡೆಗಳನ್ನೇ ಮುರಿದು ನಿಮ್ಮ ತಲೆಯನ್ನು ತೆಗೆಯುತ್ತೇವೆ ಎಂದಿದ್ದರು.





