ಮಂಡ್ಯ: ತಾಲ್ಲೂಕಿನ ಹೊಸ ಬೂದನೂರಿನಲ್ಲಿ ನೆಲೆಯಾಗಿರುವ ಕಾಶಿ ವಿಶ್ವನಾಥ ಹಾಗೂ ಅನಂತಪದ್ಮನಾಭಸ್ವಾಮಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ಉತ್ಸವಕ್ಕೆ ಹೆಲಿಟೂರಿಸಂ ಮೆರುಗು ನೀಡಲಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶಾಸಕ ರವಿಕುಮಾರ್ ಗಣಿಗ ಅವರು ಹೊಸ ಬೂದನೂರು ಗ್ರಾಮದಲ್ಲಿ ಉತ್ಸವ ನಡೆಸುವ ಹೊಸ ಸಂಪ್ರದಾಯಕ್ಕೆ 2024ರಲ್ಲಿ ಚಾಲನೆ ನೀಡಿದ್ದರು. ಅದರಂತೆ ಮೊದಲ ವರ್ಷ ಅಭೂತಪೂರ್ವ ಕಾರ್ಯಕ್ರಮ ಜನಸೂರೆಗೊಂಡಿತ್ತು.
ಈ ಬಾರಿ ಫೆಬ್ರವರಿ.21 ಮತ್ತು 22 ರಂದು ಅದ್ಧೂರಿ ಆಚರಣೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಈ ಬಾರಿ ಉತ್ಸವದ ಮೆರುಗು ಹೆಚ್ಚಿಸಲು ಹೆಲಿಕಾಪ್ಟರ್ ಮೂಲಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ನಿಗದಿತ ಶುಲ್ಕ ಪಾವತಿಸಿ ಹೆಲಿಕಾಪ್ಟರ್ ಮುಖಾಂತರ ನಗರ ವೀಕ್ಷಣೆಗ ಅವಕಾಶ ಕಲ್ಪಿಸುವ ಯೋಜನೆ ರೂಪಿಸಲಾಗಿದೆ.





