ಮಂಡ್ಯ: ಕೊಡಗಿನಲ್ಲಿ ಮಳೆ ಮತ್ತೆ ಚುರುಕು ಪಡೆದುಕೊಂಡ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯದ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದ್ದು, ಜಲಾಶಯದ ಸಂಪೂರ್ಣ ಭರ್ತಿಗೆ ಕೇವಲ 4 ಅಡಿ ಮಾತ್ರ ಬಾಕಿಯಿದೆ.
ಸದ್ಯ ಡ್ಯಾಂನಲ್ಲಿ 120 ಅಡಿ ನೀರಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್‌ನಲ್ಲಿ ಇಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ. ಜಲಾಶಯ ಒಂದು ವಾರದಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ.
ಇನ್ನು ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇಂದಿನಿಂದ ಮಳೆಯಾಗಲಿದ್ದು, ಜಲಾಶಯಕ್ಕೆ ಮತ್ತಷ್ಟು ಒಳಹರಿವು ಹರಿದುಬರಲಿದೆ. ಹೀಗಾಗಿ ಇನ್ನೂ ನಾಲ್ಕೈದು ದಿನಗಳಲ್ಲೇ ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಹವಾಮಾನ ಇಲಾಖೆ ಈ ತಿಂಗಳ ಕೊನೆಯ ವಾರದ ಮಳೆಯ ನಿರೀಕ್ಷೆ ಬಗ್ಗೆ ಹೇಳಿದೆ.. ಲಿಂಕ್ ಬಳಸಿ ಓದಿ..





