ಮಂಡ್ಯ: ಮುಡಾ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ-ಜೆಡಿಎಸ್ ಪಕ್ಷಗಳು ಪ್ರತಿಭಟನೆ ನಡೆಸುತ್ತಿದೆ. ಇತ್ತ ರಾಜ್ಯಪಾಲರು ಸಿಎಂ ವಿರುದ್ಧ ಪ್ರಶಿಕ್ಯೂಷನ್ ಹೊರಡಿಸಿದ್ದು, ಈ ಎಲ್ಲದರ ವಿರುದ್ಧವಾಗಿ ಇಂದು (ಆ.19) ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ.
ಈ ಹಿನ್ನೆಲೆ ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರ ಸಚಿವ ಎನ್.ಚಲುವರಾಯಸ್ವಾಮಿ ಸಿಎಂ ಪರ ಬ್ಯಾಟ್ ಬೀಸಿದ್ದು, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ ಎಂದು ಹೇಳಿದ್ದಾರೆ.
2023ರ ಚುನಾವಣೆ ಬಿಜೆಪಿ ಹಾಗೂ ಜೆಡಿಎಸ್ ಗೆ ನುಂಗಲಾರದ ತುತ್ತು. ವೀರೇಂದ್ರ ಪಾಟೀಲ್ ನಂತರ ಕಾಂಗ್ರೆಸ್‌ಗೆ ಈ ಬಾರಿ ಹೆಚ್ಚು ಬಹುಮತ ಬಂದಿದೆ ಹಾಗೂ ಲೋಕಸಭಾ ಚುನಾವಣೆಯಲ್ಲಿ 9 ಸ್ಥಾನ ಬಂದಿರುವುದು ಬಿಜೆಪಿ ಅವರಿಗೆ ನಿದ್ರೆಗೆಡಿಸಿದೆ.
ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅನ್ನ ನಿದ್ರೆಗೆಡಿಸಬೇಕು ಎಂಬ ಉದ್ದೇಶದಿಂದ ಸಂಚು ರೂಪಿಸಲಾಗುತ್ತಿದೆ. ಆದರೆ ನೀವು ಏನೆ ಮಾಡಿದರೂ ಸಿಎಂ ಸಿದ್ದರಾಮಯ್ಯ ಅವರನ್ನ ಮುಟ್ಟಲು ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬೊಮ್ಮಾಯಿ ಸಿಎಂ ಆದಾಗ ಕೇಂದ್ರ ಸರ್ಕಾರ ಅನುದಾನ ಘೋಷಣೆ ಮಾಡಿದ್ದರು. ಆದರೆ, ಇದುವರೆಗೂ ಅನುಧಾನ ಕೊಟ್ಟಿಲ್ಲ. ಬೆಳಗ್ಗೆ ಎದ್ದರೇ ಏನಾದರೂ ವಿಚಾರವನ್ನ ತೆಗೆದುಕೊಂಡು ಸಂಚು ಮಾಡುತ್ತಾರೆ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.
ಬೊಮ್ಮಾಯಿ ಅವರ ಮೇಲೆ ಮೊದಲು ಕೇಸ್ ದಾಖಲಿಸಬೇಕು ನಾವು ಸರ್ಕಾರ ಬಂದ ಪ್ರಾರಂಭದಲ್ಲಿ ಅಭಿವೃದ್ಧಿ ವಿಚಾರದ ಕಡೆ ಗಮನಕೊಟ್ಟಿದ್ದೇವೂ ಪ್ರಾರಂಭದಲ್ಲೇ ಇವರ ಆರೋಪದ ಮೇಲೆ ದಾಳಿ ಮಾಡಬೇಕಿತ್ತು. ನಾವು ನಿಮ್ಮಂಗೆ ಡೂಪ್ಲಿಕೇಟ್ ದೂರು ನೀಡಲ್ಲ. ರಾಜ್ಯಪಾಲರನ್ನ ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಕಾನೂನು ಬದ್ದವಾಗಿ ದೂರು ನೀಡುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ಹಗರಣವನ್ನ ನಾವು ಬಿಡುವುದಿಲ್ಲ ಎಂದು ಹೇಳಿದರು.
ಇವರ ಮೇಲಿನ ಪ್ರಕರಣಗಳನ್ನು ಇನ್ನು ಆರು ತಿಂಗಳ ಒಳಗೆ ತನಿಖೆ ಮಾಡಿಸುತ್ತೇವೆ. ಕುಮಾರಸ್ವಾಮಿ ವಿರುದ್ಧ ತನಿಖೆ ಮಾಡಲು ಪ್ರಾಸಿಕ್ಯೂಷನ್ ಗೆ ಕೇಳಿ 9 ತಿಂಗಳು ಆಗಿದೆ ಆದರೆ ರಾಜ್ಯಪಾಲರ ಬಾಯಿ ಮುಚ್ಚಿಸಿದ್ದಾರೆ. ಜೊಲ್ಲೆ, ರೆಡ್ಡಿ, ನಿರಾಣಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿಲ್ಲ. ಮೋದಿ, ಅಮಿತ್ ಶಾ ಅವರೇ ನಾಚಿಕೆ ಆಗಲ್ಲ. ಇದು ನಿಮಗೆ ಕೊಲೆಗಾಲ ಕೇಂದ್ರ ಬಿಜೆಪಿ ವಿರುದ್ಧ ಮಾತನಾಡುವ ಧಮ್ ಇರುವುದು ಸಿದ್ದರಾಮಯ್ಯ ಅವರಿಗೆ ಮಾತ್ರ.
ಸಿದ್ದರಾಮಯ್ಯ ಅವರ ಜೊತೆ ಶಾಸಕರು, ಮಂತ್ರಿಗಳು ಗಟ್ಟಿಯಾಗಿ ನಿಂತಿದ್ದೇವೆ ಕಾನೂನಾತ್ಮಕವಾಗಿ ಗೆಲುವು ಸಿಗಲಿದೆ.
ರಾಜ್ಯಪಾಲರು ಹುದ್ದೆಗೆ ಗೌರವ ಕೊಟ್ಟು ಪ್ರಾಸಿಕ್ಯೂಷನ್ ಗೆ ಅವಕಾಶ ನೀಡಬೇಕು. ಕುಮಾರಸ್ವಾಮಿ, ಜೊಲ್ಲೆ, ನಿರಾಣಿ, ರೆಡ್ಡಿ ಮೇಲೆ ಪ್ರಾಸಿಕ್ಯೂಷನ್ ಗೆ ನೀಡಬೇಕು ಎಂದು ಆಗ್ರಹಿಸಿದರು.