Mysore
31
clear sky

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ನಾಗಮಂಗಲ | ಸಂಕ್ರಾಂತಿ ಸಂಭ್ರಮ ಕಳೆಗಟ್ಟಿದ ಅಲಂಕೃತ ಎತ್ತಿನಗಾಡಿ ಮೆರವಣಿಗೆ

ಮಂಡ್ಯ: ಈ ಬಾರಿ ರೈತರ ಮೊಗದಲ್ಲಿ ಸಂತೋಷ ತುಂಬುವ ಸಂಕ್ರಾಂತಿ ಹಬ್ಬವನ್ನು‌ ವಿಶೇಷವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವಲಾಪುರದಲ್ಲಿ ಆಚರಿಸಲಾಯಿತು.

ಸುಗ್ಗಿ ಹಬ್ಬದ ಮೆರವಣಿಗೆಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಚಾಲನೆ ನೀಡಿದರು. ರೈತರ ಈ ಹಬ್ಬದಲ್ಲಿ ಮುಖ್ಯ ಆಕರ್ಷಣೆ ಎತ್ತಿನಗಾಡಿ ಮೆರವಣಿಗೆ ‌‌ ಎತ್ತುಗಳನ್ನು ಹೂವುಗಳಿಂದ ಹಾಗೂ ಎತ್ತಿನಗಾಡಿಯನ್ನು ಬಾಳೆ ಕಂಬ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ಎತ್ತಿನಗಾಡಿಯ ಮುಂಭಾಗದಲ್ಲಿ ಪಟಕುಣಿತ, ಸೋಮನ ಕುಣಿತ, ಡೊಳ್ಳು ಕುಣಿತ, ಕೊಂಬು ಕಹಳೆ, ರಂಗನ ಕುಣಿತ, ಪೂಜಾ ಕುಣಿತ ವೀರಗಾಸೆ ಸೇರಿದಂತೆ ಪೂರ್ಣ ಕುಂಭ ಹೊತ್ತ ಮಹಿಳೆಯರು ವಿಶೇಷ ಮೆರಗು ನೀಡಿದರು.

ಇದೇ ಸಂದರ್ಭದಲ್ಲಿ ದೇವಲಪುರ ಕೆರೆಗೆ ಸಚಿವರು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು‌. ಸಚಿವರು ಎತ್ತಿನಗಾಡಿ ಏರಿ ಚಾಟಿ ಹಿಡಿದಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಸಚಿವರು ರಾಶಿ ಪೂಜೆ, ಕಡಲೆಕಾಯಿ, ಅವರೆಕಾಯಿ, ಬೆಲ್ಲದ ಪರಿಷೆ, ಗ್ರಾಮೀಣ ಕ್ರೀಡಾ ಸ್ಪರ್ಧೆಗಳಾದ ಹಗ್ಗ- ಜಗ್ಗಾಟ ಹಾಗೂ ಕಬ್ಬಡಿಯಲ್ಲಿ ಸ್ಪರ್ಧಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಗಮನ ಸೆಳೆದ ವಸ್ತು ಪ್ರದರ್ಶನ‌ ಮಳಿಗೆಗಳು ರೈತರಿಗೆ ಮಾಹಿತಿ ಮೀಡಲು ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಪದ್ಧತಿ ಹಾಗೂ ರಾಗಿ ಬೆಳೆಯ ಪಾರಂಪರಿಕ ಹಾಗೂ ಆಧುನಿಕ ಪದ್ಧತಿಗಳು, ತೋಟಗಾರಿಕೆ ಇಲಾಖೆಯಿಂದ ಹಣ್ಣು ಹಾಗೂ ತರಕಾರಿ ಮೇಲಿನ ಆಕರ್ಷಕ ಕೆತ್ತನೆಗಳು, ರೇಷ್ಮೆ, ಮೀನುಗಾರಿಕೆ, ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸರ್ಕಾರದ ಯೋಜನೆಗಳ ಕುರಿತು ವಿಷಯಗಳನ್ನು ಪ್ರದರ್ಶಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

Tags: