ಮಂಡ್ಯ: ಸಿಎಂ ಸಿದ್ದರಾಮಯ್ಯ ನವೆಂಬರ್.15 ರಂದು ಕಳೆದ ಮೇಲೆ ಬದಲಾಗುತ್ತಾರೆಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಇಂದು(ಫೆಬ್ರವರಿ.2) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಅಶೋಕ್ ಯಾವಾಗ ಎಐಸಿಸಿ ಇನ್ ಚಾರ್ಜ್ ತೆಗೆದುಕೊಂಡರು? ಮೊದಲು ಅವರ ಪಕ್ಷದವರನ್ನು ಸರಿಪಡಿಸಿಕೊಳ್ಳಲಿ. ಅವರ ಪಕ್ಷದ ನಾಯಕರೇ ತಮ್ಮ ಪಕ್ಷದವರ ವಿರುದ್ಧ ತೊಡೆ ತಟ್ಟುತ್ತಿದ್ದಾರೆ. ಆದರೆ ನಮ್ಮ ಪಕ್ಷದ ನಾಯಕರು ಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಬಿ.ಆರ್.ಪಾಟೀಲ್ ರಾಜೀನಾಮೆ ವಿಚಾರ
ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಲಹೆಗಾರ ಹುದ್ದೆಗೆ ಬಿ.ಆರ್.ಪಾಟೀಲ್ ರಾಜೀನಾಮೆ ನೀಡಿರುವ ಬಗ್ಗೆ ಮಾತನಾಡಿದ ಅವರು, ಪಾಟೀಲ್ ಯಾಕೆ ರಾಜೀನಾಮೆ ನೀಡಿದ್ದಾರೆ ಎಂದು ಗೊತ್ತಿಲ್ಲ. ಮುಂದೆ ಬೇರೆ ಅವಕಾಶಕ್ಕಾಗಿ ಮಾಡಿದ್ದಾರೋ ಅದು ಗೊತ್ತಿಲ್ಲ. ಅದರ ಕುರಿತು ಮಾತನಾಡಲು ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾರೆ. ಆದರೆ ಸಿಎಂ ಅವರು ಈಗ ರೆಸ್ಟ್‌ನಲ್ಲಿ ಇದ್ದಾರೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಕರ್ನಾಟಕಕ್ಕೆ ಬಂದರೆ ಹೊಟ್ಟೆಕಿಚ್ಚು ಎಂಬ ಎಚ್‌ಡಿಕೆ ಹೇಳಿಕೆ
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು,
ಅಯ್ಯೋ ಪಾಪಾ ಕುಮಾರಸ್ವಾಮಿ ಅವರು ಇವಾಗೇನು ಏನು ತಮಿಳುನಾಡಿನಲ್ಲಿದ್ದಾರಾ? ಇಲ್ಲೆ ಓಡಾಡುತ್ತಿದ್ದಾರೆ. ವಾರಕ್ಕೆ ನಾಲ್ಕು ದಿನ ರಾಜ್ಯದಲ್ಲಿಯೇ ಇರಲಿ ನಮಗೆ ಬೇಜಾರಿಲ್ಲ. ಆದರೆ ಅವರು ಎಲ್ಲಿದ್ದಾರೆ ಅನ್ನೋದು ಮುಖ್ಯ ಅಲ್ಲ ಕರ್ನಾಟಕಕ್ಕೆ ಏನು ಮಾಡ್ತಾರೆ ಅನ್ನೋದು ಮುಖ್ಯ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ಅವರ ಭರವಸೆ ಗೊತ್ತಿದೆ, ಅವರು ಮಾತಿನಲ್ಲಿ ರುಸ್ತುಂರು, ಅನುಕಂಪ ಗೀಟಿಸುವಲ್ಲಿ ನಂಬರ್ ಒನ್. ಸಿಂಪಲ್ ಮನುಷ್ಯ ಅನ್ನೋದನ್ನ ಎಕ್ಸ್ಪೋಸ್ ಮಾಡಿಕೊಳ್ಳುತ್ತಾರೆ. ನೀವು ಪ್ಯಾಂಟ್, ಪಂಚೆ, ಸೂಟ್ ಹಾಕೊಂಡ್ ಬರ್ತಿರೋ ನಮಗೆ ಹೊಟ್ಟೆ ತುಂಬಲ್ಲ. ರಾಜ್ಯಕ್ಕೆ ಅನುಕೂಲವಾಗುವ ಕಾರ್ಯಕ್ರಮ ಕೊಡಿಸಿ. 25 ಸಾವಿರ ಕೋಟಿ ನೀರಾವರಿಗೆ ಕೊಡಸಲಿ. ಅಲ್ಲದೇ ಸಮಗ್ರವಾಗಿ ರಾಜ್ಯದ ಅಭಿವೃದ್ಧಿ ಮಾಡಿಸಲಿ. ಇಷ್ಟೋತ್ತಿಗೆ ಏನಾದರೂ ಒಂದು ಘೋಷಣೆ ಮಾಡಬೇಕಿತ್ತು. ಆಗ ನಾನೇ ಅವರನ್ನು ಅಭಿನಂದಿಸುತ್ತಿದ್ದೆ ಎಂದು ಹೇಳಿದರು.
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ನಮ್ಮ ರಾಜ್ಯಕ್ಕೆ ಅತ್ಯಂತ ಅನ್ಯಾಯ ಆಗಿದೆ. ನಮ್ಮ ರಾಜ್ಯ ನೂರಾರು ವರ್ಷಗಳ ನಂತರ ಬರಗಾಲ ಎದುರಿಸಿದರು ಸಹ ಕೇಂದ್ರ ಹಣವನ್ನು ನೀಡಿಲ್ಲ. ಅವರು ಪ್ರಧಾನ ಮಂತ್ರಿ ಮೋದಿ ಹತ್ತಿರ ಹೋಗಲು ಸಾಧ್ಯನಾ? ಹೀಗಾಗಿ ಅವರೊಂದಿಗೆ ನಾನು ಏನು ಮಾತನಾಡಲಿ ಎಂದು ಪ್ರಶ್ನಿಸಿದರು.