ಮದ್ದೂರು: ಮದ್ದೂರಿನ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಸದ ಯದುವೀರ್ ಒಡೆಯರ್ ಅವರು, ದಸರಾ ಸಂಭ್ರಮದ ವೇಳೆ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಸೇರಿದಂತೆ ಅನೇಕ ಪೂಜಾ ಪುನಸ್ಕಾರಗಳು ರಾಜರಿಗೆ ಹಾಗೂ ರಾಜಮನೆತನಕ್ಕೆ ಸೇರಿದ ಪೂಜೆಗಳಾಗಿರುತ್ತದೆ.
ಇದನ್ನು ಓದಿ: ಮದ್ದೂರು| ಕಲ್ಲು ತೂರಾಟ ಪ್ರಕರಣ: ಹಿಂದೂ ಮುಖಂಡರಿಂದ ಶಾಂತಿ ಸಭೆ ಬಹಿಷ್ಕಾರ
ದಸರಾ ಉದ್ಘಾಟನೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಸರ್ಕಾರದ ಜೊತೆ ನಡೆಯುತ್ತವೆ. ಖಾಸಗಿ ದರ್ಬಾರಿಗೂ ದಸರಾಗೂ ಯಾವುದೇ ಸಂಬಂಧವಿರುವುದಿಲ್ಲ. ಆದರೆ ಅವುಗಳು ಜೊತೆ ಜೊತೆಯಲ್ಲೇ ನಡೆಯುತ್ತವೆ ಅಷ್ಟೇ ಎಂದು ಹೇಳಿದರು.




