Mysore
29
broken clouds

Social Media

ಮಂಗಳವಾರ, 03 ಫೆಬ್ರವರಿ 2026
Light
Dark

ವಿಶೇಷಚೇತನ ಮಕ್ಕಳ ಶಾಲೆಗೆ ವಾಹನ ಹಸ್ತಾಂತರಿಸಿದ ಶಾಸಕ ರಮೇಶ್‌ ಬಂಡಿಸಿದ್ದೇಗೌಡ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರಿಂದು ವಿಶೇಷ ಚೇತನ ಮಕ್ಕಳ ಶಾಲೆಗೆ ವಾಹನ ಹಸ್ತಾಂತರಿಸಿದರು.

ಮಂಡ್ಯದ ಮರೀಗೌಡ ಬಡಾವಣೆಯ ಆಶಾ ಸದನ ವಿಶೇಷ ಚೇತನ ಮಕ್ಕಳ ಶಾಲೆಗೆ 9 ಲಕ್ಷ ರೂ ವೆಚ್ಚದ ಉಚಿತ ನೂತನ ಶಾಲಾ ವಾಹನವನ್ನು ಶಾಸಕರು ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು, ಬಂಡಿಸಿದ್ದೇಗೌಡ ಫೌಂಡೇಶನ್‌ ವತಿಯಿಂದ ಜನೋಪಯೋಗಿ ಕೆಲಸಕ್ಕೆ ಚಾಲನೆ ನೀಡಿದ್ದೇವೆ. ಆಶಾ ಸದನ ಶಾಲೆಯು ಈ ಭಾಗದಲ್ಲಿ ಬುದ್ದಿಮಾಂದ್ಯ ಮಕ್ಕಳಿಗೆ ಒಳ್ಳೆಯ ಸೇವೆ ಮಾಡುತ್ತಿದ್ದಾರೆ. ಅಂಗವಿಕಲರು ಹಾಗೂ ಬುದ್ದಿಮಾಂದ್ಯ ಮಕ್ಕಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸಣ್ಣ ಕೊಡುಗೆಯಾಗಿ ಬಂಡಿಸಿದ್ದೇಗೌಡ ಫೌಂಡೇಶನ್‌ ವತಿಯಿಂದ ಶಾಲಾ ವಾಹನ ವಿತರಣೆ ಮಾಡಿದ್ದೇವೆ ಎಂದು ಹೇಳಿದರು.

Tags:
error: Content is protected !!