Mysore
22
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮೇಕೆದಾಟು ಯೋಜನೆ ದೇವೇಗೌಡರ ಕುಟುಂಬದಿಂದಲೇ ಆಗಬೇಕು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

kumaraswamy and devegowda

ಮಂಡ್ಯ: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನವರು ಎಲ್ಲವನ್ನು ಬಿಟ್ಟು ಮೊದಲು ತಮಿಳುನಾಡಿನವರನ್ನು ಒಪ್ಪಿಸಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮೇಕೆದಾಟು ಯೋಜನೆಗೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಕಾಂಗ್ರೆಸ್‌ನವರು ಮೊದಲು ತಮಿಳುನಾಡಿನವರನ್ನು ಒಪ್ಪಿಸಲಿ. ತಮಿಳುನಾಡಿನವರು ಹಾಗೂ ಕಾಂಗ್ರೆಸ್‌ನವರು ಪಾಟ್ನರ್‌ಗಳು. ಅವರ ಒಪ್ಪಿಗೆ ತಗೊಂಡು ಬನ್ನಿ, ಬಳಿಕ ಮೇಕೆದಾಟು ಮಾಡಿಸೋಣಾ. ಮೇಕೆದಾಟು ಯೋಜನೆ ಆಗಬೇಕು ಅಂದರೆ ದೇವೇಗೌಡರ ಕುಟುಂಬದಿಂದಲೇ ಆಗಬೇಕು. ಇವರ ಯಾರ ಕೈಯಲ್ಲೂ ಆಗಲ್ಲ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದರು.

ಇನ್ನು ಮೈಶುಗರ್ ಶಾಲೆಯನ್ನು ಲೀಸ್‌ಗೆ ಹಾಕುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೈಶುಗರ್ ಶಾಲೆ ಯಾರ ಅಪ್ಪಂದು ಎಂದು ಲೀಸ್‌ಗೆ ಕೊಡ್ತಾ ಇದ್ದಾರೆ.
ಪುಣ್ಯಾತ್ಮರು ಕಟ್ಟಿರುವ ಶಾಲೆಯನ್ನು ಲೀಸ್‌ಗೆ ಹಾಕಲು ಹೋಗ್ತಾ ಇದ್ದಾರೆ. ಮೈಶುಗರ್ ಶಾಲೆಯ ಪ್ರಾಪರ್ಟಿ ಬೆಲೆ ಎಷ್ಟಿದೆ ಗೊತ್ತಾ? ಎಂದು ಪ್ರಶ್ನಿಸಿದರು.

ಇನ್ನು ಮೈಶುಗರ್ ಶಾಲೆ ಅಭಿವೃದ್ಧಿಗೆ ಎಷ್ಟು ಕೋಟಿ ಬೇಕು ಅದನ್ನು ಕೊಡಲು ನಾನು ತಯಾರಿದ್ದೇನೆ. ಸಂಬಳ ಕೊಡಲು ಫಿಕ್ಸೇಡ್ ಇಡಲು ತಯಾರಿದ್ದೇನೆ. ನಾನು ಮೈಶುಗರ್ ಶಾಲೆಗೆ ಒಬ್ಬ ಸದಸ್ಯ ಇದ್ದೇನೆ. ನನ್ನ ಬಳಿ ಯಾವನು ಬಂದು ಚರ್ಚೆ ಮಾಡಿದ್ದಾನೆ. ನಾನು ಒಬ್ಬ ಟ್ರಸ್ಟಿ ಇದ್ದೇನೆ. ಯಾವ ಕಾನೂನು ಆಧಾರದ ಮೇಲೆ ಲೀಸ್‌ಗೆ ಕೊಡಲು ಹೊರಟಿದ್ದಾರೆ. ಮೈಶುಗರ್ ಶಾಲೆ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

Tags:
error: Content is protected !!