ಮಂಡ್ಯ: ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಇಬ್ಬರು ಮಹಿಳೆಯರನ್ನು ರಕ್ಷಿಸಿ, ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಲಾಡ್ಜ್‌ವೊಂದರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿತ್ತು. ಅಮಾಯಕ ಹೆಣ್ಣು ಮಕ್ಕಳನ್ನು ಹಣದ ಆಮಿಷವೊಡ್ದಿ ಕರೆತಂದು ವೇಶ್ಯಾವಾಟಿಕೆ ದಂಧೆಯನ್ನು ನಡೆಸಲಾಗುತ್ತಿತ್ತು. ಈ ವೇಶ್ಯಾವಾಟಿಕೆ ದಂಧೆಯಲ್ಲಿ ಒಬ್ಬ ಮಹಿಳಾ ದಂಧೆಕೋರಳು ಸಹ ಇರುವುದಾಗಿ ತಿಳಿದುಬಂದಿದೆ.
ಇಲ್ಲಿ ದಂಧೆ ನಡೆಯುತ್ತಿದ್ದ ವಿಚಾರವನ್ನು ಅಲ್ಲಿನ ಸ್ಥಳೀಯರು ಒಡನಾಡಿಗೆ ಮಾಹಿತಿ ತಿಳಿಸಿದ್ದರು. ಈ ದಂಧೆಕೋರರು ಬಾಂಗ್ಲಾದೇಶ, ಪಶ್ಚಿಮ ಬಂಗಾಳ ಸೇರಿದಂತೆ ಇನ್ನಿತರ ಮೂಲದಿಂದಲೂ ಹೆಣ್ಣು ಮಕ್ಕಳನ್ನು ಕರೆಯಿಸಿ ದೊಡ್ಡ ಪ್ರಮಾಣದಲ್ಲೇ ದಂಧೆ ನಡೆಸುತ್ತಿದ್ದರು, ಪ್ರತಿದಿನ 30ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗಿರಾಕಿಗಳು ಈ ಲಾಡ್ಜ್‌ಗೆ ಹೋಗಿ ಬರುತ್ತಿದ್ದರು.
ದಂಧೆಯನ್ನು ನಡೆಸುತ್ತಿದ್ದ ಎಲ್ಲಾ ಮಾಹಿತಿಯನ್ನು ಪಡೆದ ಒಡನಾಡಿ ಸಂಸ್ಥೆಯು ತಕ್ಷಣ ಅಲ್ಲಿನ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದೆ.
ಮಾಹಿತಿ ಸ್ವೀಕರಿಸಿದ ಪೊಲೀಸ್ ನೀರಿಕ್ಷಕರು ತಂಡವೊಂದನ್ನು ರಚಿಸಿದ್ದು, ಒಡನಾಡಿಯು ಪೊಲೀಸ್ ಸಹಯೋಗದಲ್ಲಿ ವೇಶ್ಯಾವಾಟಿಕೆ ಮೇಲೆ ದಾಳಿ ನಡೆಸಿದೆ. ಈ ದಾಳಿಯ ವೇಳೆ ಇಬ್ಬರು ಅಮಾಯಕ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.





