ಮಂಡ್ಯ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ನಡುವೆಯೇ ಕೃಷಿ ಚಟುವಟಿಕೆ ಹಾಗೂ ಹಂದಿ ಸಾಕಾಣಿಕೆಗೆಂದು ತೆಗೆದುಕೊಂಡಿದ್ದ ಸಾಲು ತೀರಿಸಲು ಸಾಧ್ಯವಾಗದೇ ತಾಲೂಕಿನ ಬಿದರಕಟ್ಟೆ ಗ್ರಾಮದಲ್ಲಿ ರೈತ ನೇಣಿಗೆ ಶರಣಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಸ್ವಾಮಿ(47) ಆತ್ಯಹತ್ಯೆ ಮಾಡಿಕೊಂಡವರು. ಈತ ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ಕೃಷಿ ಜತೆಗೆ ಹಂದಿ ಸಾಕಾಣಿಕೆ ಮಾಡುತ್ತಿದ್ದರು. ಇದಕ್ಕಾಗಿ ವಿವಿಧ ಬ್ಯಾಂಕ್‌ನಲ್ಲಿ 1.60ಲಕ್ಷ ರೂ ಹಾಗೂ ಮೂರು ಮೈಕ್ರೋ ಫೈನಾನ್ಸ್ ಸಂಸ್ಥೆಯಲ್ಲಿ 7.90 ಲಕ್ಷ ರೂ ಪತ್ನಿ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್‌ನಲ್ಲಿ 60 ಸಾವಿರ ರೂ ಮತ್ತು ಸ್ಥಳೀಯರಿಂದ 5 ಲಕ್ಷ ರೂ ಸಾಲ ಮಾಡಿಕೊಂಡಿದ್ದರು.
ಆದರೆ, ಬೆಳೆ ನಷ್ಟದ ಜತೆಗೆ ರೋಗದಿಂದ ಹಲವು ಹಂದಿ ಸಾವನ್ನಪ್ಪಿದ್ದವು. ಪರಿಣಾಮ ಸಾಲ ತೀರಿಸಲು ಸಾಧ್ಯವಾಗಲಿಲ್ಲ.
ಹೀಗಾಗಿ ಸಾಲ ಕೊಟ್ಟವರು ವಾಪಸ್ ಕೊಡುವಂತೆ ಕೇಳುತ್ತಿದ್ದಾರೆ. ಇದರಿಂದಾಗಿ ಬೇಸರಗೊಂಡು ಜ.19ರಂದು ತಮ್ಮ ಜಮೀನಿನಲ್ಲಿದ್ದ ಶೆಡ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಗೆದುಕೊಂಡಿದ್ದ ಸಾಲ ತೀರಿಸಲಾಗದೇ ಹಾಗೂ ಜೀವನದಲ್ಲಿ ಜಿಗುಪ್ಸೆಗೊಂಡು ಶರಣಾಗಿದ್ದಾರೆಂದು ಬಸರಾಳು ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ದಾಖಲು ಮಾಡಿದ್ದಾರೆ.