Mysore
24
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಜಿಲ್ಲಾಧಿಕಾರಿ ದಿಢೀರ್‌ ಭೇಟಿ : ಸಾರ್ವಜನಿಕರಿಗೆ ಸ್ಪಂದಿಸದ ಅಧಿಕಾರಿಗಳಿಗೆ ಎಚ್ಚರಿಕೆ

dc mandya

ಮಳವಳ್ಳಿ: ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ, ಸಾರ್ವಜನಿಕರಿಗೆ ಸ್ಪಂದಿಸದ ಕಂದಾಯ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಕಚೇರಿಗೆ ಬರುತ್ತಿದ್ದಂತೆ ಬಾಗಿಲ ಬಳಿಯಲ್ಲೇ ಸಾರ್ವಜನಿಕರು ನಿಂತು ಸಂತಸ ವ್ಯಕ್ತಪಡಿಸಿ, ತಮ್ಮ ದೂರುಗಳು, ಸಮಸ್ಯೆ ಬಗ್ಗೆ ಹೇಳಿಕೊಂಡರು. ದೂರುಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಒಂದೊಂದು ಅರ್ಜಿಗೂ ಸಂಬಂಧಪಟ್ಟ ಸಿಬ್ಬಂದಿಯನ್ನು ಕರೆಸಿ, ಸ್ಥಳದಲ್ಲೇ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಖಡಕ್ ಎಚ್ಚರಿಕೆ ನೀಡಿದರು.

ಕಂದಾಯ ಅಧಿಕಾರಿ ಅಮಾನತ್ತಿಗೆ ಸೂಚನೆ: ಜಮೀನಿಗೆ ಖಾತೆ ಮಾಡಲು ನ್ಯಾಯಾಲಯದಲ್ಲಿ ತಡೆ ಇದೆ ಎಂದು ಖಾತೆ ಮಾಡಿಕೊಡಲು ನಿರಾಕರಿಸಿದ್ದ ಕಂದಾಯ ಅಧಿಕಾರಿಯ ಮೇಲೆ ಗರಂ ಅದ ಜಿಲ್ಲಾಧಿಕಾರಿಗಳು, ತಡೆ ನೀಡಿರುವ ಸರ್ವೆ ನಂಬರ್ ಬೇರೆ ಇದೆ. ಆದರೆ, ಇವರ ಸರ್ವೆ ನಂಬರಿಗೆ ತಡೆ ಇದೆ ಎಂದು ಇವರಿಗೆ ಕಡಿತ ವಿಲೆ ಏಕೆ ? ನಿಮ್ಮ ಉದ್ದೇಶವೇನು? ಎಂದು ಪ್ರಶ್ನಿಸಿದ ಅವರು, ನಿಮ್ಮ ತಪ್ಪಿನಿಂದ ಜನರು ಅಲೆದಾಡುವಂತಾಗಿದೆ ಎಂದು ತಹಸಿಲ್ದಾರ್ ಅವರನ್ನು ಕರೆದು ಇವರನ್ನು ಅಮಾನತ್ತು ಮಾಡಲು ಕ್ರಮವಹಿಸಬೇಕು ಎಂದು ಖಡಕ್ ಸೂಚನೆ ನೀಡಿದರು.

ನಂತರ ತಹಸಿಲ್ದಾರ್ ಕಚೇರಿಗೆ ತೆರಳಿ ಪ್ರತಿಯೊಬ್ಬರಿಂದ ದೂರುಗಳನ್ನು ಸ್ವೀಕರಿಸಿ, ಜನರಿಗೆ ತೊಂದರೆಯಾಗಬಾರದು, ತಹಸಿಲ್ದಾರ್ ಅವರೆ ಈ ದೂರುಗಳಿಗೆ ಈ ಕೂಡಲೇ ಕ್ರಮಕೈಗೊಂಡು ಜನರಿಗೆ ಉತ್ತಮ ಸೇವೆ ನೀಡಬೇಕು ಎಂದು ಸೂಚಿಸಿದರು.

ಮುಜರಾಯಿ ದೇವಸ್ಥಾನ ಮುಸ್ಲಿಂ ಹೆಸರಿನಲ್ಲಿ: ಮುಜರಾಯಿ ದೇವಸ್ಥಾನದ ಜಾಗ ಮುಸ್ಲಿಂ ವ್ಯಕ್ತಿಯ ಹೆಸರಿನಲ್ಲಿರುವುದರ ಬಗ್ಗೆ ಗಮನಕ್ಕೆ ತಂದಾಗ, ತಹಸಿಲ್ದಾರ್ ಅವರಿಗೆ ಕೂಡಲೇ ದಾಖಲಾತಿ ನೋಡಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.

12 ವರ್ಷಗಳ ಅಲೆದಾಟ: 1962 ಲ್ಲಿ ಸರ್ವೆ ಇಲಾಖೆ ಅಧಿಕಾರಿಗಳಿಂದ ಅಗಿರುವ ಲೋಪ ಸರಿಪಡಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸುಮಾರು 2013ರಿಂದ ಮನವಿ ನೀಡುತ್ತಲೆ ಇದ್ದೇವೆ, ದಯವಿಟ್ಟು ನ್ಯಾಯ ಒದಗಿಸಿಕೊಡಬೇಕು ಎಂದು ಮಹೇಂದ್ರಸ್ವಾಮಿ, ಮಹದೇವಪ್ಪ ಮನವಿ ಮಾಡಿದರು.

ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಮುಖ್ಯಾಧಿಕಾರಿ ನಾಗರತ್ನಮ್ಮ, ತಹಸಿಲ್ದಾರ್ ಲೋಕೇಶ್, ಕಂದಾಯ ಅಧಿಕಾರಿಗಳು ಭಾಗವಹಿಸಿದ್ದರು.

Tags:
error: Content is protected !!