Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮಂಡ್ಯ ಸಮ್ಮೇಳನ | ಬೆಲ್ಲದಾರತಿ ಸ್ಮರಣ ಸಂಚಿಕೆ ಬಿಡುಗಡೆ

belladaarathi

ಮಂಡ್ಯ : 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಸಲ್ಲಿ ಸಿದ್ಧಪಡಿಸಿರುವ ಬೆಲ್ಲದಾರತಿ ಸ್ಮರಣ ಸಂಚಿಕೆಯನ್ನು ಭಾನುವಾರ ಡಾ: ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಲ್ಲದ ಆರತಿ ಸಲ್ಲಿಸಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು.

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಗೊ.ರು ಚನ್ನಬಸಪ್ಪ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ನಂತರ ಮಾತನಾಡಿ, ಸ್ಮರಣ ಸಂಚಿಕೆ ಕನ್ನಡ ಸಾಹಿತ್ಯ ಸಮ್ಮೇಳನದ ಅಭಿಮಾನ ಹಾಗೂ ಹೆಮ್ಮೆಯ ಭಾಗವಾಗಿದೆ. ಇದು ಸದಾ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮವಾಗಿದೆ ಎಂದರು.

ಬೆಲ್ಲದಾರತಿ ಮಂಡ್ಯ ಜಿಲ್ಲೆಯ ಮಹತ್ವದ ದಾಖಲೆ, ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ವಿಶ್ವ ರೂಪ ದರ್ಶನ, 1000 ಪುಟಗಳಿಕ್ಕಿಂತ ಹೆಚ್ಚಿನ ಪು ಹೊಂದಿರುವ ಈ ಗ್ರಂಥ 132 ಲೇಖನಗಳನ್ನು ಒಳಗೊಂಡಿದೆ. ಸಮ್ಮೇಳನಾಧ್ಯಕ್ಷರುಗಳು, ಕರ್ನಾಟಕ ಭಾರತ, ವಿಶ್ವ, ಅಭಿವೃದ್ಧಿ ಭಾರತ ಮತ್ತು ಮಧುರ ಮಂಡ್ಯ ಎಂಬ 5 ವಿಭಾಗಗಳು ಒಳಗೊಂಡಿದೆ.

ನಮ್ಮ ದೇಶವನ್ನೀಗ ನವಗ್ರಹಗಳು ಸುತುತ್ತಿವೆ. ಈ ನವಗ್ರಹಗಳು ಶಾಸ್ತ್ರ-ಪುರಾಣಗಳಲ್ಲಿ ಬರುವ ನವಗ್ರಹಗಳಲ್ಲ. ಆಧುನಿಕರೆನ್ನುವ ನಾವೇ ನಮ್ಮ ವಿಕೃತ ಮನಸ್ಸುಗಳಿಂದ ಸೃಷ್ಟಿಸಿರುವ ನವಗ್ರಹಗಳು. ಅವೆಂದರೆ, ವ್ಯಕ್ತಿಚಾರಿತ್ರ್ಯದ ದಾರಿದ್ರ, ಜಾಗತೀಕರಣದ ಜೂಜು, ಹಣ ಮತ್ತು ಅಧಿಕಾರದ ಹುಚ್ಚು, ಬುದ್ದಿಜೀವಿಗಳ ಮೂರ್ಖತನ, ನೈಸರ್ಗಿಕ ಸಂಪತ್ತಿನ ದುರ್ಬಳಕೆ, ಮತಾಂಧತೆಯ ಮತಿಹೀನತೆ, ರಾಜಕೀಯ ವ್ಯವಸ್ಥೆಯ ಅನಾಯಕತ್ವ, ಧರ್ಮದ ಅಪವ್ಯಾಖ್ಯಾನ ಮತ್ತು ಆಧ್ಯಾತ್ಮಿಕತೆಯ ಅಭಾವ ಎಂದರು.

ಈ ಅನಿಷ್ಟ ನವಗ್ರಹಗಳ ಹಾವಳಿಯಲ್ಲಿ ನಮ್ಮ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸ್ವಾರ್ಥದ ಸಿಕ್ಕು, ಸ್ಥಾನದ ಸೊಕ್ಕು, ಸೇಡಿನ ಹಠ, ಅಸಹಿಷ್ಣುತೆ, ಭಯೋತ್ಪಾದನೆ, ಭ್ರಷ್ಟಾಚಾರ, ಲೈಂಗಿಕ ಲಾಲಸೆ, ವಿಶ್ವಾಸದ್ರೋಹ ಇತ್ಯಾದಿ ಅವಗುಣಗಳೆಲ್ಲ ತುಂಬಿಕೊಂಡು ಬಿಟ್ಟಿವೆ. , ಇದೆ ನೆಮ್ಮದಿ ಎನ್ನುವುದು ಬರಿಯ ಭ್ರಮೆಯಾಗಿದೆ. ಇದರಿಂದ ನಾವು ಹೊರಬರಬೇಕಿದೆ ಎಂದರು.

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಮಾತನಾಡಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಪುಣ್ಯದ ವಿಷಯ ಎಂದರು.

ಮಂಡ್ಯ ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯದ್ಭುತವಾಗಿ ಮೂಡಬಂದಿದೆ. ಇಲ್ಲಿ ನಡೆದ ಸಮ್ಮೇಳನದಲ್ಲಿ ಸೇರಿದ ಕನ್ನಡಾಸ್ತರು ಮುಂದೆ ನಡೆಯುವ ಸಮ್ಮೇಳನ ಆಯೋಜಕರಿಗೆ ಮಾದರಿಯಾಗಿದೆ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಪೂರ್ವಸಿದ್ಧತೆಗಳು ಅತ್ಯವಶ್ಯಕವಾಗಿರುತ್ತದೆ. ಕನ್ನಡಕ್ಕಾಗಿ ಓಟ ಸಂಘಟಿಸಿದ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರು, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಹಾಗೂ ಪೊಲೀಸ್ ಬ್ಯಾಂಡ್ ಕಾರ್ಯಕ್ರಮವನ್ನು ಸಂಘಟಿಸಲು ಸಹಕರಿಸಿದ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಸೇರಿದಂತೆ ಎಲ್ಲಾ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಅತಿ ಶೀಘ್ರದಲ್ಲೇ ಕನ್ನಡ ಭವನಕ್ಕೆ ಶಂಕುಸ್ಥಾಪನೆ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿನಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಸಾಹಿತ್ಯ ಸಮ್ಮೇಳನದ ಉಳಿತಾಯ ಹಣ 2.20 ಕೋಟಿ ರೂ ಹಣವನ್ನು ಮೀಸಲಿಡಲಾಗಿತ್ತು. ಜಿಲ್ಲೆಯಲ್ಲಿ ಆಕರ್ಷಕವಾಗಿ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಶಾಸಕರ ಅನುದಾನದಡಿ ಶಾಸಕರಾದ ದಿನೇಶ್ ಗೂಳಿಗೌಡ, ರಮೇಶ್ ಬಂಡಿಸಿದ್ದೇಗೌಡ ಹಾಗೂ ಪಿ. ರವಿಕುಮಾರ ಅವರು ತಲಾ ಒಂದು ಕೋಟಿ ಅನುದಾನ ಕೊಡಲು ಒಪ್ಪಿರುತ್ತಾರೆ. ಒಟ್ಟಾರೆ ಅತ್ಯಕರ್ಷಕವಾಗಿ 5 ಕೋಟಿ ರೂ ಅನುದಾನದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಾಗುವುದು ಎಂದರು.

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗೆ ಸಮ್ಮೇಳನದ ವಿಶೇಷಾಧಿಕಾರಿ ಚಂದ್ರಶೇಖರ್ ಅವರು ನೀಡಿದ ಶೀರ್ಷಿಕೆ ಬೆಲ್ಲದಾರತಿ ಎಂಬ ಹೆಸರು ಆಯ್ಕೆಯಾಗಿರುವುದು ವಿಶೇಷ.

ಬೆಲ್ಲದಾರತಿ ಸ್ಮರಣಾ ಸಂಚಿಕೆ ಹೊರತರಲು ಶ್ರಮಿಸಿದ ಬಿ.ಸಿ. ಶಿವಾನಂದಮೂರ್ತಿ, ತೈಲೂರು ವೆಂಕಟಕೃಷ್ಣ, ಡಾ: ಚಿಕ್ಕಮರಳಿ ಬೋರೇಗೌಡ, ಮೀರಾ ಶಿವಲಿಂಗಯ್ಯ, ಮಾ ರಾಮಕೃಷ್ಣ, ಜಿ.ಆರ್ ಚಂದ್ರಶೇಖರ್, ಕೋಮಲ್ ಕುಮಾರ್, ಕೃಷ್ಣ ಮೂರ್ತಿ, ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

Tags:
error: Content is protected !!