Mysore
22
few clouds

Social Media

ಸೋಮವಾರ, 17 ಫೆಬ್ರವರಿ 2025
Light
Dark

ಮಂಡ್ಯ: ಕೆರೆಗಳ ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಮಂಡ್ಯ: ಜಿಲ್ಲಾಡಳಿತದ ವತಿಯಿಂದ ಈಗಾಗಲೇ ಸಮೀಕ್ಷೆ ನಡೆಸಿ 962 ಕೆರೆಗಳ ಅಳತೆಯನ್ನು ನಿಗದಿಪಡಿಸಲಾಗಿಸಿದೆ. ಒತ್ತುವರಿ ತೆರವುಗೊಳಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆರೆ ಒತ್ತುವರಿ ತೆರವು ಸಮಿತಿ ಸಭೆ ನಡೆಸಿ ಇಲಾಖೆವಾರು ವ್ಯಾಪ್ತಿಗೆ ಬರುವ ಕೆರೆಗಳ ಒತ್ತುವರಿ ಹಾಗೂ ತೆರವುಗೊಳಿಸಿದ ವಿವರವನ್ನು ಪಡೆದುಕೊಂಡರು.

ಕೆರೆಗಳ ಸರ್ವೆ ಮಾಡಿಕೊಡಲಾಗಿದೆ. ಅಧಿಕಾರಿಗಳು ಮಹಜರ್ ಮಾಡಿ ಒತ್ತುವರಿ ತೆರವುಗೊಳಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿ. ಅದರ ಸಂರಕ್ಷಣೆ ಮಾಡಿಕೊಳ್ಳಲು ಯೋಜನೆ ರೂಪಿಸಿಕೊಂಡು ಅನುದಾನ ಪಡೆದು ಕ್ರಮ ಕೈಗೊಳ್ಳಿ. ಕೆರೆಗಳ ಸುತ್ತ ಆಗಿಂದಾಗ ಪರಿಶೀಲನೆ ನಡೆಸಿ ಒತ್ತುವರಿಯಾಗದಂತೆ ನೋಡಿಕೊಳ್ಳಿ. ಕೆರೆ ಒತ್ತುವರಿ ತೆರವು ಕುರಿತು ಸರ್ಕಾರಕ್ಕೆ ವರದಿ ನೀಡಬೇಕಿದ್ದು, ವರದಿಯನ್ನು ಶೀಘ್ರವಾಗಿ ಸಲ್ಲಿಸಿ ಎಂದರು.

ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುವವರ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಿ ಎಂದರು.

ಜಿಲ್ಲಾ ಪಂಚಾಯತ್. ಹೆಚ್.ಎಲ್.ಬಿ.ಸಿ, ಕಾ.ನೀ.ನಿ.ನಿ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಒಳಪಡುವ 962 ಕೆರೆಗಳ
ನೀರನ್ನು ಪರೀಕ್ಷೆಗೊಳಪಡಿಸಿ, ಪ್ರತಿ ಕೆರೆಗಳಿಗೂ ಸಹ ಜಿ.ಪಿ.ಎಸ್. ಮ್ಯಾಪಿಂಗ್ ಕಡ್ಡಾಯವಾಗಿ ಮಾಡಿಸಿ, ಕೆರೆ ನೀರ ಕಲುಷಿತವಾಗಂದಂತ್ತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ ಹಾಗೂ ಸಾರ್ವಜನಿಕರು ಕೆರೆಗಳನ್ನು ಕಲುಷಿತ ಮಾಡದಂತೆ ಜಾಗೃತಿ ಸೂಚನ ಪಲಕಗಳನ್ನು ಅಳವಡಿಸಿ ಅದರ ಛಾಯಾಚಿತ್ರಗಳನ್ನು ಲಗತ್ತಿಸಿ ಎಂದರು.

ಸಾರ್ವಜನಿಕರು ಕೆರೆ ಕಲುಷಿತಗೊಳಿಸದಂತೆ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನರಿಗೆ ಜಾಗೃತಿ ಮುಡಿಸಿ, ಕೆರೆಗಳ ನೀರನ್ನು ಕಲುಷಿತಗೊಳಿಸುವ ಸಾರ್ವಜನಿಕರ ವಿರುದ್ಧ ಕಠಿಣ ಕ್ರಮ ಜರುಗಿಸಿ, ದೂರು ನೀಡಲು ಜಿಲ್ಲಾ ಮಟ್ಟದಲ್ಲಿ ದೂರು ನಿರ್ವಹಣಾ ಕೇಂದ್ರ ಸ್ಥಾಪಿಸಬೇಕು, ಕೆರೆಗಳನ್ನು ಸಂರಕ್ಷಿಸಲು ಸ್ಥಳೀಯವಾಗಿ ಕೆರೆ ಸಂರಕ್ಷಣ ಸಮಿತಿಯನ್ನು ರಚಿಸಿ ಎಂದು ಹೇಳಿದರು.

ಸಭೆಯಲ್ಲಿ ಪರಿಸರ ಹಾಗೂ ವಾಯುಮಾಲಿನ್ಯ ನಿಯಂತ್ರಣ ಅಧಿಕಾರಿ ಗೀತಾ, ಜಲಮಂಡಳಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಮೇಘಾ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Tags: