Mysore
32
moderate rain

Social Media

ಭಾನುವಾರ, 20 ಸೆಪ್ಟೆಂಬರ್ 2026
Light
Dark

ಕೇರಳ ಲಾಟರಿಯಲ್ಲಿ 25 ಕೋಟಿ ಗೆದ್ದ ಮಂಡ್ಯದ ಯುವಕ

ಮಂಡ್ಯ: ಕೇರಳದ ಲಾಟರಿ ಮಂಡ್ಯ ಜಿಲ್ಲೆ ಪಾಂಡವಪುರ ನಿವಾಸಿ ಮೆಕ್ಯಾನಿಕ್ ಅಲ್ತಾಫ್‌ ಪಾಷಾ ಪಾಲಾಗಿದೆ.

ಬರೋಬ್ಬರಿ 25 ಕೋಟಿ ರೂ ಮೌಲ್ಯದ ಲಾಟರಿಯನ್ನು ಅಲ್ತಾಪ್‌ ಪಾಷಾ ಗೆದ್ದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಕೆಲಸದ ನಿಮಿತ್ತ ನೆರೆಯ ಕೇರಳಕ್ಕೆ ತೆರಳಿದ್ದ ಅಲ್ತಾಫ್‌ ಪಾಷಾ 500ರೂಪಾಯಿ ಕೊಟ್ಟು ಲಾಟರಿ ಟಿಕೆಟ್‌ ಖರೀದಿ ಮಾಡಿದ್ದರು.

ಇದೀಗ ಅಲ್ತಾಫ್‌ ಪಾಷಾ ಖರೀದಿ ಮಾಡಿದ್ದ ಲಾಟರಿ ಟಿಕೆಟ್‌ಗೆ ಬಂಪರ್‌ ಬಹುಮಾನ ಬಂದಿದ್ದು, ತೆರಿಗೆ ಕಳೆದು ಅಲ್ತಾಫ್‌ಗೆ 17.5 ಕೋಟಿ ರೂ ಮೊತ್ತ ಸಿಗಲಿದೆ.

ಬಹುಮಾನದ ಹಣ ತರಲು ಅಲ್ತಾಫ್‌ ಹಾಗೂ ಕುಟುಂಬಸ್ಥರು ಕೇರಳಕ್ಕೆ ದೌಡಾಯಿಸಿದ್ದು, ಲಾಟರಿ ಭಾಗ್ಯದಲ್ಲಿ ಬಡ ಮೆಕ್ಯಾನಿಕ್‌ ಕೋಟ್ಯಾಧಿಪತಿಯಾಗಿದ್ದಾನೆ.

Tags:
error: Content is protected !!