Mysore
31
scattered clouds

Social Media

ಮಂಗಳವಾರ, 31 ಮಾರ್ಚ್ 2026
Light
Dark

ಅನುಮಾನಾಸ್ಪದವಾಗಿ ವ್ಯಕ್ತಿ ಸಾವು: ಮನೆ ಜಗುಲಿಯಲ್ಲೇ ಶವ ಪತ್ತೆ

ಮಂಡ್ಯ: ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಅಕ್ಕಮ್ಮನಕೊಪ್ಪಲು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮನೆ ಜಗುಲಿಯಲ್ಲೇ ಅನುಮಾನಾಸ್ಪದವಾಗಿ ಮಂಜು ಶವ ಪತ್ತೆಯಾಗಿದೆ.

ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಮಂಜು ಮುಖ ಹಾಗೂ ಕತ್ತಿನಲ್ಲಿ ಗಂಭೀರವಾದ ಗಾಯದ ಗುರುತು ಪತ್ತೆಯಾಗಿದೆ.

ಬನ್ನೂರಿನಲ್ಲಿ ಅಂಗಡಿ ಇಟ್ಟುಕೊಂಡು ಕುಟುಂಬದ ಜೊತೆಗೆ ಮಂಜು ವಾಸವಾಗಿದ್ದರು. ಸಂಬಂಧಿಕರ ಗೃಹಪ್ರವೇಶ ಎಂದು ಹುಲ್ಲೇಗಾಲಕ್ಕೆ ಹೋಗಿದ್ದ ಮಂಜು ಮನೆಗೆ ವಾಪಸ್‌ ಆಗದ ಹಿನ್ನೆಲೆಯಲ್ಲಿ ಪತ್ನಿ ಆತಂಕಗೊಂಡಿದ್ದರು.

ಬೆಳಿಗ್ಗೆ ಹುಟ್ಟೂರು ಅಕ್ಕಮ್ಮನಕೊಪ್ಪಲಿನ ಮನೆಯ ಜಗುಲಿಯಲ್ಲಿ ಶವ ಪತ್ತೆಯಾಗಿದೆ. ಈ ಸಂಬಂಧ ಮಳವಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!