ಮಂಡ್ಯ: ಹಣಕಾಸು ವಿಚಾರಕ್ಕೆ ನಡೆದ ಗಲಾಟೆಯಲ್ಲಿ ತೀವ್ರ ಹಲ್ಲೆಗೊಳಗಾಗಿದ್ದ ಯುವಕ 13 ದಿನಗಳ ಬಳಿಕ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲ್ಲೂಕಿನ ಮುಟ್ಟನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಸುಮಂತ್ ಎಂಬಾತನೇ ಮೃತ ಯುವಕನಾಗಿದ್ದಾನೆ. ಗ್ರಾಮದ ಅಂಬರೀಷ್ ಹೆಂಡತಿ ಜೊತೆ ಹಣಕಾಸು ವಿಚಾರಕ್ಕೆ ಯುವಕ ಗಲಾಟೆ ಮಾಡಿಕೊಂಡಿದ್ದ. ಘಟನೆ ಬಳಿಕ ಸುಮಂತ್‌ನನ್ನು ಕರೆಸಿಕೊಂಡು ಅಂಬರೀಷ್ ಬೆಂಬಲಿಗರು ತೀವ್ರ ಹಲ್ಲೆ ನಡೆಸಿದ್ದರು.
ಇದನ್ನೂ ಓದಿ:- ಟಿ.ನರಸೀಪುರ| ಅಪಘಾತದ ವೇಳೆ ನದಿಗೆ ಬಿದ್ದಿದ್ದ . ತಾಯಿಯ ಮೃತದೇಹ ಪತ್ತೆ
ಮಾತಿನ ಚಕಮಕಿ ವೇಳೆ ಸುಮಂತ್ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದರು. ಗಲಾಟೆಯಲ್ಲಿ ಗಂಭೀರ ಗಾಯಗೊಂಡಿದ್ದ ಸುಮಂತ್ ಕೋಮಾ ಸ್ಥಿತಿ ತಲುಪಿದ್ದ, ಗಾಯಾಳುಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಯುವಕ ಮೃತಪಟ್ಟಿದ್ದಾನೆ. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.