Mysore
29
few clouds

Social Media

ಶನಿವಾರ, 25 ಏಪ್ರಿಲ 2026
Light
Dark

ಶ್ರೀರಂಗಪಟ್ಟಣ| ಸ್ಮಶಾನದ ರಸ್ತೆಗೆ ಬೇಲಿ ಹಾಕಿದ ವ್ಯಕ್ತಿ: ರಸ್ತೆ ಮಧ್ಯೆಯೇ ಅಂತ್ಯಕ್ರಿಯೆ

ಶ್ರೀರಂಗಪಟ್ಟಣ: ಸಾರ್ವಜನಿಕ ಸ್ಮಶಾನಕ್ಕೆ ಹೋಗುವ ರಸ್ತೆಗೆ ರೈತನೋರ್ವ ಬೇಲಿ ಹಾಕಿ ಮೃತನ ಅಂತ್ಯಕ್ರಿಯೆಗೂ ರಸ್ತೆ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಸ್ಮಶಾನ ರಸ್ತೆಯಲ್ಲೇ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿರುವ ಅಮಾನವೀಯ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿಹುಂಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸತೀಶ್‌ ಎಂಬ ಯುವಕ ಮೃತಪಟ್ಟಿದ್ದ. ಈ ಗ್ರಾಮದ ರೈತ ಅಂದಾನಿಗೌಡ ಸ್ಮಶಾನದ ರಸ್ತೆ ತನ್ನ ಜಮೀನಿನಲ್ಲಿ ಇದೆ ಎಂದು ಕಳೆದ ಹದಿನೈದು ದಿನಗಳ ಹಿಂದೆ ಮುಳ್ಳು ತಂತಿ ಬೇಲಿ ಹಾಕಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ರಸ್ತೆ ಮಧ್ಯೆಯೇ ನಡೆಸಿದ್ದಾರೆ.

Tags:
error: Content is protected !!