ಮಳವಳ್ಳಿ : ಹಲಗೂರಿನಿಂದ ಮುತ್ತತ್ತಿಗೆ ಹೋಗುವ ಮಾರ್ಗ ಮಧ್ಯೆ ಸಿಗುವ ಕೆಸರಕ್ಕಿ ಹಳ್ಳದ ತಿರುವಿನಲ್ಲಿ ಸಾರಿಗೆ ಬಸ್‌ವೊಂದರ ಬ್ರೇಕ್ ವಿಫಲವಾಗಿ ಚಾಲಕ ಜಯರಾಜ್ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿರುವ ಘಟನೆ ವರದಿಯಾಗಿದೆ.
ಇದನ್ನು ಓದಿ: ಅಪಘಾತ : ಕೂಲಿಯಾಳು ಸಾವು, 6ಮಂದಿ ಕಾರ್ಮಿಕರು ಗಂಭೀರ
ಕನಕಪುರ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಪ್ರಸಿದ್ಧ ಪ್ರವಾಸಿಗರ ಪ್ರೇಕ್ಷಣೀಕ ಸ್ಥಳವಾದ ಮುತ್ತತ್ತಿ ಆಂಜನೆಯಸ್ವಾಮಿ ದೇವಸ್ಥಾನಕ್ಕೆ ಕಾರ್ತಿಕ ಮಾಸದ ಅಂಗವಾಗಿ ಮತ್ತು ಶನಿವಾರ ದೇವರ ದರ್ಶನ ಪಡೆುಂಲು ಸುಮಾರು ೪೦ಕ್ಕೂ ಹೆಚ್ಚು ಪ್ರಾಯಾಣಿಕರನ್ನು ಹೊತ್ತು ತೆರಳುತ್ತಿತ್ತು. ಕೆಸರಕ್ಕಿ ಹಳ್ಳದ ಕಡಿದಾದ ರಸ್ತೆಯಲ್ಲಿ ತಿರುವು ಪಡೆಯುತ್ತಿದ್ದ ಸಂದರ್ಭದಲ್ಲಿ ಬಸ್‌ನ ಬ್ರೇಕ್ ವಿಫಲವಾಗಿ ಈ ವೇಳೆ ವಿಚಲಿತರಾಗದ ಚಾಲಕ ಪ್ರಾಯಣಿಕರಿಗೆ ಗಟ್ಟಿಯಾಗಿ ಹಿಡಿದುಕೊಳ್ಳುವಂತೆ ಧೈರ್ಯ ಹೇಳಿದ್ದಾರೆ. ಕೂಡಲೇ ಬಸ್ ನಿಯಂತ್ರಣ ಕಳೆದುಕೊಳ್ಳದಂತೆ ಚಾಲನೆ ಮಾಡುತ್ತಾ ರಸ್ತೆ ಬದಿಯಲ್ಲಿದ್ದ ಕಲ್ಲಿನ ಗುಡ್ಡೆಗೆ ಹತ್ತಿಸಿ ಬಸ್ ನಿಲ್ಲಿಸಿದ್ದಾರೆ.
ಗಾಯಗೊಂಡ ನಿರ್ವಾಹಕಿಯಾದ ಸೌಜನ್ಯರನ್ನು ಹಲಗೂರಿನ ಬಸ್ ನಿಲ್ದಾಣದ ಮೇಲ್ವಿಚಾರಕ ಸಿ.ಎಂ.ಗೌಡ ಹಲಗೂರು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.





