Mysore
33
few clouds

Social Media

ಭಾನುವಾರ, 26 ಏಪ್ರಿಲ 2026
Light
Dark

ಕೆ.ಆರ್ ಪೇಟೆ: ಚಿರತೆ ದಾಳಿಗೆ ಸಾಕು ನಾಯಿ ಬಲಿ

ಮಂಡ್ಯ : 15 ಸಾವಿರ ಬೆಲೆ ಬಾಳುವ ಜರ್ಮನ್ ಶೆಫರ್ಡ್ ತಳಿಯ ಸಾಕು ನಾಯಿಯನ್ನು ಚಿರತೆಯು ತಿಂದು ಹಾಕಿರುವ ಘಟನೆ ಕೆ ಆರ್‌ ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಮೊಸಳೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ನಾಗರಾಜು ಎಂಬುವರ ಮನೆ ಪಕ್ಕದಲ್ಲಿರುವ ಪಶು ಸಾಕಾಣಿಕೆ ಶೆಡ್ಡಿನಲ್ಲಿ ಕಟ್ಟಿದ್ದ ಸಾಕು ನಾಯಿಯನ್ನು ಗುರುವಾರ ರಾತ್ರಿ ಸುಮಾರು ಒಂದು ಗಂಟೆ ಸಮಯದಲ್ಲಿ ಚಿರತೆ ದಾಳಿ ನಡೆಸಿ ತಲೆ ಬಿಟ್ಟು ದೇಹದ ಎಲ್ಲ ಭಾಗವನ್ನು ತಿಂದು ಹಾಕಿದೆ.

ಅದೃಷ್ಟವಶಾತ್ ಶೆಡ್ಡಿನಲ್ಲಿ ಬೇರೆ ಯಾವುದೇ ಸಾಕು ಪ್ರಾಣಿಗಳನ್ನು ಕಟ್ಟದಿದ್ದ ಕಾರಣ ಅವುಗಳ ಪ್ರಾಣ ಉಳಿದಿದೆ.

ಗ್ರಾಮದ ಒಳಗೆ ನುಗ್ಗಿ ಚಿರತೆ ದಾಳಿ ಮಾಡಿರುವುದರಿಂದ ಗ್ರಾಮಸ್ಥರು ಭಯ ಭೀತರಾಗಿದ್ದು, ಕೂಡಲೇ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಚಿರತೆಯನ್ನು ಸರೆಹಿಡಿಯುಂತೆ ಮೊಸಳೆಕೊಪ್ಪಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!