Mysore
29
scattered clouds

Social Media

ಶನಿವಾರ, 02 ನವೆಂಬರ್ 2024
Light
Dark

ಕಾವೇರಿ ನದಿಯಲ್ಲಿ ನಟ ಸುದೀಪ್ ತಾಯಿ ಅಸ್ತಿ ವಿಸರ್ಜನೆ

ಮಂಡ್ಯ: ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದ ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಅವರ ತಾಯಿ ಸರೋಜಾ ಅಸ್ತಿಯನ್ನು ಇಂದು ವಿಸರ್ಜನೆ ಮಾಡಲಾಯಿತು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗೋಸಾಯಿಘಾಟ್‌ ಬಳಿಯಿರುವ ಕಾವೇರಿ ನದಿಯಲ್ಲಿ ನಟ ಸುದೀಪ್‌ ಅವರು, ತಾಯಿ  ಸರೋಜಾ ಅವರ ಅಸ್ತಿ ವಿಸರ್ಜಿಸಿ ಸದ್ಗತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇಂದಿನ ವಿಧಿ ವಿಧಾನ ಕಾರ್ಯದಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ಅಸ್ತಿ ವಿಸರ್ಜನೆ ಕಾರ್ಯವನ್ನು ಚಿತ್ರೀಕರಿಸದಂತೆ ಮಾಧ್ಯಮಗಳಿಗೆ ಸುದೀಪ್‌ ಮನವಿ ಮಾಡಿದ್ದರು. ಬಳಿಕ ಅಸ್ತಿ ವಿಸರ್ಜನೆ ಕಾರ್ಯ ಮುಗಿಸಿ ಸುದೀಪ್‌ ಹಾಗೂ ಕುಟುಂಬಸ್ಥರು ಬೆಂಗಳೂರಿಗೆ ತೆರಳಿದರು.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್‌ ತಾಯಿ ಅರೋಜಾ ಅವರು ಕಳೆದ ಭಾನುವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದರು. ಅಂದು ಸಂಜೆಯ ವೇಳೆಗೆ ವಿಲ್ಸನ್‌ ಗಾರ್ಡನ್‌ ಚೀತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತ್ತು.

 

 

Tags: