ಮಂಡ್ಯ: ಕೆ.ಆರ್.ಸಾಗರ ಬೃಂದಾವನಕ್ಕೆ ಬಂದಿದ್ದ ಕೇರಳ ಮೂಲದ ಬಸ್ಸೊಂದು ಹಿಂಬದಿ ಚಲಿಸಿದ ಪರಿಣಾಮ ಕೇರಳ ಮೂಲದ ಮಹಿಳೆ ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ಬೃಂದಾವನ ಬಸ್ ಪಾರ್ಕಿಂಗ್‌ನಲ್ಲಿ ನಡೆದಿದೆ.
ಕೇರಳದ ಕೊಲ್ಲಂ ಗ್ರಾಮದ ಮಹಿಳೆಯರಿಬ್ಬರು ಬೃಂದಾವನ ವೀಕ್ಷಣೆ ಮಾಡಿಬಂದು ಊಟ ಮಾಡುತ್ತಿದ್ದರು. ಈ ವೇಳೆ ಅಲ್ಲೇ ನಿಂತಿದ್ದ ಕೇರಳ ಬಸ್ಸೊಂದು ಏಕಾಏಕಿ ಹಿಂಬದಿ ಚಲಿಸಿದೆ.
ಇದನ್ನು ಓದಿ: ಟಿಪ್ಪರ್-ಕಾರಿನ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರು ಸಾವು
ಈ ವೇಳೆ ಕಟ್ಟೆಯೊಂದರಲ್ಲಿ ಕುಳಿತು ಊಟ ಮಾಡುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಬಸ್ ಗುದ್ದಿದೆ. ಪರಿಣಾಮ ತೀವ್ರ ಗಾಯಗೊಂಡಿದ್ದ ಇಬ್ಬರು ಮಹಿಳೆಯರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೌಸಲ್ಯ ಎಂಬ ಮಹಿಳೆ ಸಾವನ್ನಪ್ಪಿದ್ದು, ಮತ್ತೋರ್ವ ಮಹಿಳೆ ನಾರಾಯಣಿ ಎಂಬುವವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಕೆ.ಆರ್.ಸಾಗರ ಪೊಲೀಸ್ ಠಾಣೆ ಪಿ.ಎಸ್.ಐ ರಮೇಶ್ ಕರಕಿಕಟ್ಟೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರವಾಸಿಗರಿಂದ ಮಾಹಿತಿ ಪಡೆದರು.





